HomeKarnatakaಸಿಇಟಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: 2 ಕೃಪಾಂಕ ಘೋಷಣೆ

ಸಿಇಟಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: 2 ಕೃಪಾಂಕ ಘೋಷಣೆ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2 ಕೃಪಾಂಕಗಳನ್ನು ಘೋಷಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಏಪ್ರಿಲ್ 23 ಮತ್ತು 24ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ 26ರಂದು ತಾತ್ಕಾಲಿಕ ಸರಿ ಉತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ತಜ್ಞರ ಸಮಿತಿಯು ಪರಿಶೀಲಿಸಿ ಸರಿಯುತ್ತರಗಳನ್ನು ಪರಿಷ್ಕರಣೆ ಮಾಡಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯದ ತಲಾ ಒಂದು ಪ್ರಶ್ನೆಗೆ ಕೃಪಾಂಕ ಪ್ರಕಟಿಸಲಾಗಿದೆ. ಜೀವಶಾಸ್ತ್ರದಲ್ಲಿ ಒಂದು ಉತ್ತರಕ್ಕೆ ಎರಡು ಪರ್ಯಾಯ ನೀಡಲಾಗಿದೆ. ಗಣಿತಶಾಸ್ತ್ರದ ಸರಿಯುತ್ತರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂಲ ದಾಖಲೆ ಪರಿಶೀಲನೆ

ಸಿಇಟಿ ಅರ್ಜಿಯಲ್ಲಿ ಕ್ಲಾಸ್ (Clause) A1, B1, B, C, D, E, F, G, H, I, J, K, L, M, N and O ಎಂದು ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಕಚೇರಿಯಲ್ಲಿ ಸೋಮವಾರ ಆರಂಭವಾಗಿದ್ದು, ಇದು ಮೇ 22ರವರೆಗೆ ನಡೆಯಲಿದೆ.

ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಮುನ್ನ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಬರಲು ಸೂಚಿಸಲಾಗಿತ್ತು. ಕೆಲವರು ಸ್ಲಾಟ್ ಬುಕ್ ಮಾಡಿಕೊಂಡು ಬಂದಿದ್ದರೆ ಇನ್ನು ಕೆಲವರು ನೇರ ಬಂದು ದಾಖಲೆ ಪರಿಶೀಲನೆಗೆ ಬೇಡಿಕೆ ಸಲ್ಲಿಸಿದರು. ಇದರಿಂದ ಯೋಜನಾಬದ್ಧವಾಗಿ ದಾಖಲೆ ಪರಿಶೀಲನೆ ಆಗಬೇಕು ಎನ್ನುವ ಪ್ರಾಧಿಕಾರದ ಉದ್ದೇಶಕ್ಕೆ ಸ್ವಲ್ಪ ಹಿನ್ನಡೆ ಆಯಿತು. ಹೀಗಾಗಿ ದಯವಿಟ್ಟು ಸ್ಲಾಟ್ ಬುಕ್ ಮಾಡಿಕೊಂಡೇ, ನಿಗದಿತ ದಿನಾಂಕ ಮತ್ತು ಸಮಯಕ್ಕೆ‌ ಬರಲು ಈ ಮೂಲಕ ಸೂಚಿಸಲಾಗಿದೆ. ಇದರಿಂದ ಅನಗತ್ಯ ಗೊಂದಲ, ಸರಥಿ ಸಾಲಿನಲ್ಲಿ ನಿಲ್ಲುವ ತೊಂದರೆ ತಪ್ಪಲಿದೆ.

 Y ಅರ್ಹತಾ ಕಂಡಿಕೆಯ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿಲ್ಲ. ಅನ್ ಲೈನ್ ಹಾಗೂ ಕಾಲೇಜಿನಲ್ಲಿ ದಾಖಲೆ ಪರಿಶೀಲನೆ ಮಾಡಿಕೊಂಡಿರುವ A ಕ್ಲಾಸ್ ನವರು ಕೂಡ ಬರುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular