ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಅಕ್ಕಿಯ ಜೊತೆಗೆ ರಾಗಿ ವಿತರಿಸಲಾಗುವುದು.
ಪ್ರಸ್ತುತ ಪ್ರತಿ ವ್ಯಕ್ತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು ಸೇರಿದಂತೆ ಒಟ್ಟು 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ತಿಂಗಳಿಂದ ಗ್ರಾಹಕರಿಗೆ 2 ಕೆಜಿ ರಾಗಿ ವಿತರಿಸಲು ಆಹಾರ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ 1.14 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಗಳಿದ್ದು, 4.01 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ.
ಅವರಿಗೆ ವಿತರಿಸಲು ಪ್ರತಿ ತಿಂಗಳು 57 ಸಾವಿರ ಮೆಟ್ರಿಕ್ ಟನ್ ರಾಗಿ ಅಗತ್ಯವಿದೆ. ಹತ್ತು ತಿಂಗಳಿಗೆ ನೀಡಲು ಅಗತ್ಯವಿರುವಷ್ಟು ರಾಗಿ ಸಂಗ್ರಹಿಸಲಾಗಿದೆ. ಸುಮಾರು 20 ರಿಂದ 30 ಸಾವಿರ ಮೆಟ್ರಿಕ್ ಟನ್ ನಷ್ಟು ರಾಗಿಯನ್ನು ಅನ್ಯ ರಾಜ್ಯಗಳಿಗೆ ನೀಡಲು ನಿಗಮ ನಿರ್ಧರಿಸಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮವು 5.2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ದಾಸ್ತಾನು ಮಾಡಿದೆ. ಮೇ 15ರವರೆಗೆ ನೋಂದಾಯಿತ ರೈತರಿಗೆ ರಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ತಿಂಗಳಿಂದ ಪಡಿತರದಲ್ಲಿ 2 ಕೆಜಿ ರಾಗಿ ವಿತರಿಸಲಾಗುವುದು ಎನ್ನಲಾಗಿದೆ.
ಹಳೆ ಮೈಸೂರು ಭಾಗದವರಿಗೆ ಎರಡು ಕೆಜಿ ರಾಗಿ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದ ಪಡಿತರ ಚೀಟಿದಾರರಿಗೆ 2 ಕೆಜಿ ಜೋಳ ನೀಡಲು ನಿರ್ಧರಿಸಲಾಗಿದೆ,

