ದಾವಣಗೆರೆ: ಜುಲೈ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡ್ ದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡ್ ಗೆ ಈ ಮಾಹೆಯ ಹಂಚಿಕೆ ಇರುವುದಿಲ್ಲ. 4 ಸದಸ್ಯರಿರುವ ಪ್ರತಿ ಕಾರ್ಡ್ ಗೆ 10 ಕೆ.ಜಿ ಅಕ್ಕಿ, 21 ಕೆಜಿ ರಾಗಿ, ಆದ್ಯತಾ ಕಾರ್ಡ್ ಗೆ 2 ಕೆಜಿ ಅಕ್ಕಿ 3 ಕೆಜಿ ರಾಗಿ, ಎಎವೈ 4 ಸದಸ್ಯರಿಗೆ 5 ಕೆಜಿ 5 ಸದಸ್ಯರಿಗೆ 10 ಕೆಜಿ ಬಿಪಿಎಲ್ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

