HomeLatest News'ಭಾಗ್ಯಲಕ್ಷ್ಮೀ' ಫಲಾನುಭವಿಗಳಿಗೆ ಗುಡ್ ನ್ಯೂಸ್: ಬಾಂಡ್ ಪರಿಪಕ್ವ ಮೊತ್ತ ಪಾವತಿ

‘ಭಾಗ್ಯಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ಬಾಂಡ್ ಪರಿಪಕ್ವ ಮೊತ್ತ ಪಾವತಿ

ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ನೊಂದಣಿಯಾಗಿ 18 ವರ್ಷ ಪೂರ್ಣಗೊಂಡ ಫಲಾನುಭವಿಗಳು 2024-25ನೇ ಸಾಲಿನ ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿರುತ್ತಾರೆ.

ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅರ್ಹ ಫಲಾನುಭವಿಗಳು ಎಲ್.ಐ.ಸಿ ಭಾಗ್ಯಲಕ್ಷ್ಮೀ ಫಾರಂ ಭರ್ತಿ ಮಾಡಿ, ಫಾರಂನೊಂದಿಗೆ, ಮೂಲ ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್, ಶಾಲಾ ಧೃಡೀಕರಣ, ಮಗುವಿನ ಬ್ಯಾಂಕ್ ಖಾತೆ, ಮಗು, ತಂದೆ ಮತ್ತು ತಾಯಿ ಆಧಾರ್, ಅಪರೇಷನ್ ಕಾರ್ಡ್, ಚುಚ್ಚುಮದ್ದು ಕಾರ್ಡ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಪೊಷಕರ ದೃಢೀಕರಣ ಲಗತ್ತಿಸಿ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದ ಹತ್ತಿರದ ಬಾಲ ಭವನ ಆವರಣದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular