HomeKarnatakaಬೆಂಗಳೂರಿಗರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಬೆಂಗಳೂರು ಒನ್’ ನಲ್ಲೇ ಆಸ್ತಿ ತೆರಿಗೆ ಪಾವತಿಗೆ...

ಬೆಂಗಳೂರಿಗರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಬೆಂಗಳೂರು ಒನ್’ ನಲ್ಲೇ ಆಸ್ತಿ ತೆರಿಗೆ ಪಾವತಿಗೆ ಅವಕಾಶ..!

ಬೆಂಗಳೂರು : ಆಸ್ತಿ ತೆರಿಗೆ ಪಾವತಿಸುವುದನ್ನು ಸರಳೀಕರಣ ಮಾಡಲು ಬಿಬಿಎಂಪಿ ಮುಂದಾಗಿದೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಪಹಣಿ ಮಾಡಿಸೋದು ಬೆಂಗಳೂರಿಗೆ ತಲೆನೋವಾಗಿದ್ದು, ಈ ಹಿನ್ನೆಲೆ ಬಿಬಿಎಂಪಿಯ ಬಜೆಟ್ ನಲ್ಲಿ ಕಂದಾಯ ಸೇವೆಗಳ ಸರಳೀಕರಣ ಘೋಷಣೆ ಆಗಲಿದೆ.

ಬಿಬಿಎಂಪಿ ಇದೇ ಮೊದಲ ಬಾರಿಗೆ ಬೆಂಗಳೂರು   ಒನ್ ನಲ್ಲಿ   ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಬಜೆಟ್ನಲ್ಲಿ ಘೋಷಣೆ ಮಾಡಲು ಮುಂದಾಗಿದೆ.

ಖಾತೆ ಬದಲಾವಣೆ, ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಹೀಗೆ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಸಾರ್ವಜನಿಕರಿಂದ ಸಲಹೆ ಬಂದಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular