ಬೆಂಗಳೂರು : ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ ‘ನಂಬಿಕೆ ನಕ್ಷೆ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುಲಭ ಮತ್ತು ಪಾರದರ್ಶಕ ಸೇವೆಯೇ ನಮ್ಮ ಗುರಿ ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ ‘ನಂಬಿಕೆ ನಕ್ಷೆ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನೋಂದಾಯಿತ ಇಂಜಿನಿಯರ್ಗಳ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಿದ 15 ದಿನದೊಳಗೆ ಪರಿಶೀಲನೆ ಪೂರ್ಣಗೊಂಡು, ಶುಲ್ಕ ಪಾವತಿಸಿದ ಕೂಡಲೇ ಕ್ಯೂಆರ್ ಕೋಡ್ ಸಹಿತ ಅಂತಿಮ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

