ರಾಜ್ಯ ಸರ್ಕಾರದಿಂದ ‘ಕುಶಲಕರ್ಮಿ’ಗಳಿಗೆ ಗುಡ್ ನ್ಯೂಸ್ : ವಿವಿಧ ‘ಸೌಲಭ್ಯ’ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ವಾರ್ತೆ): ಬೆಂಗಳೂರು ನಗರ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2024-25ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳಾದ ಬಡಗಿ, ಗಾರೆ. ದೋಬಿ, ಕಲ್ಲುಕೆಲಸ. ಕುಲುಮೆ ಕೆಲಸ ಮಾಡುವ ಗ್ರಾಮೀಣ ಕುಶಲಕರ್ಮಿಗಳಿಗೆ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವೆಬ್ ಸೈಟ್ www.bengaluruban.nic.in (check whats new window, ಹೊಸತೇನಿಧೆ) ನಲ್ಲಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 16 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು (ಗ್ರಾಕೈ) ರವರ ಕಛೇರಿ. ಬೆಂಗಳೂರು ನಗರ ಜಿಲ್ಲೆ, ಎಸ್.ಜೆ.ಪಿ ಪಾಲಿಟೆಕ್ನಿಕ್ ಕಾಲೇಜು ಆವರಣ, ಕೆ.ಆರ್.ವೃತ್ತ, ಬೆಂಗಳೂರು-01 ಅಥವಾ ದೂರವಾಣಿ ಸಂಖ್ಯೆ : 080-22375765/ 9448876441 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಉಪ ನಿರ್ದೇಶಕರು (ಖಾಗಾ) ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read