ಬೆಂಗಳೂರು: ರೈತರಿಗೆ ನಮ್ಮ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ʼನನ್ನ ಭೂಮಿʼ ಗ್ಯಾರಂಟಿ ಅಭಿಯಾನದಡಿ ಕೇವಲ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್‌ನೊಳಗೆ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಈ ಮೂಲಕ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ರೈತರಿಗೆ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ನನ್ನ ಭೂಮಿ ಗ್ಯಾರಂಟಿ ಅಭಿಯಾನದಡಿ ಡಿಸೆಂಬರ್ ಒಳಗೆ ಎರಡು ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಹಿಂದಿನ ಎಲ್ಲಾ ಸರ್ಕಾರದ ಅವಧಿಯಲ್ಲಿ ಮೂರು ವರ್ಷದಲ್ಲಿ ಕೇವಲ 5801 ಪ್ರಕರಣಗಳಲ್ಲಿ ರೈತರಿಗೆ ಪೋಡಿ ದುರಸ್ತಿಯಾಗಿತ್ತು. ನಮ್ಮ ಸರ್ಕಾರ 9 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಇನ್ನೂ 50ರಿಂದ 70 ಸಾವಿರ ಪೋಡಿ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.