HomeKarnatakaಕರಾಮುವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸುವರ್ಣಾವಕಾಶ : ಮಾ. 31 ರೊಳಗೆ ಅರ್ಜಿ ಸಲ್ಲಿಸಿ

ಕರಾಮುವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸುವರ್ಣಾವಕಾಶ : ಮಾ. 31 ರೊಳಗೆ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ 2025-26ನೇ ಸಾಲಿನ ಜನವರಿ ಆವೃತ್ತಿಯ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯವು 2025-26ನೇ ಜನವರಿ ಆವೃತ್ತಿಯ ಯು.ಜಿ ಮತ್ತು ಪಿ.ಜಿ ಕೋಸ್ರ್ಗಳ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಈಗಾಗಲೇ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ಮುಕ್ತ ವಿಶ್ವವಿದ್ಯಾನಿಲಯವು “ನಿಮ್ಮ ಮನೆಯೇ ನಿರಂತರ ಪಾಠಶಾಲೆ”ಎಂಬ ಧ್ಯೇಯ ವಾಕ್ಯದೊಂದಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿಶ್ವ ವಿದ್ಯಾನಿಲಯವಾಗಿದೆ.

ಯುಜಿಸಿ ನಿಯಮಗಳ ಪ್ರಕಾರ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಏಕ ಕಾಲದಲ್ಲಿ ಓದಲು ಅವಕಾಶವಿದ್ದು ,ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ, ಯುಜಿಸಿ ಮಾನ್ಯತೆ ಹೊಂದಿದ ಶೈಕ್ಷಣಿಕ ಕಾರ್ಯಕ್ರಮಗಳ 2025-26ರ ಜನವರಿ ಆವೃತ್ತಿಗೆ ನೇರ ಪ್ರವೇಶಾತಿಯನ್ನು ಒಳಗೊಂಡಂತೆ ಪ್ರಥಮ ವರ್ಷದ ಒಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ ಬಿ.ಎ, ಬಿಕಾಂ, ಬಿ.ಲಿಬ್.ಐಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್‍ಸಿ, ಬಿಎಸ್‍ಡಬ್ಲ್ಯು ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಾದ ಎಂ.ಎ, ಎಂ.ಎ(ಪತ್ರಿಕೋದ್ಯಮ) ಎಂಕಾಂ, ಎಂಬಿಎ, ಎಂಎಸ್ಸಿ, ಎಂಸಿಎ, ಎಂಎಸ್‍ಡಬ್ಲ್ಯು, ಎಂ.ಲಿಬ್‍ಐ.ಎಸ್‍ಸಿ ಮತ್ತು ಪಿಜಿ ಡಿಪ್ಲೊಮಾ  ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ 2025-26 ರ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯಿಂದ ಹೊಸದಾಗಿ ಪ್ರಾರಂಭಿಸಿರುವ ಜ್ಯೋತಿರ್‍ವಿಜ್ಞಾನ (ಪಲ ಜ್ಯೋತಿಷ್ಯ, ಮೇಧಿನಿ ಜ್ಯೋತಿಷ್ಯ ವಾಸ್ತು ಜ್ಯೋತಿಷ್ಯ) ಮತ್ತು ಲಿಂಗ್ವಿಸ್ಟಿಕ್ಸ್ ಕೋಸ್ರ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ, ಪ್ರವೇಶಾತಿಯು ದಿನಾಂಕ:31.03.2026 ಅಂತಿಮ ದಿನವಾಗಿದೆ.

ಪ್ರವೇಶಾತಿಗೆ ಎಸ್.ಎಸ್.ಲ್.ಸಿ ಅಂಕಪಟ್ಟಿ ಪ್ರತಿ. ಪಿ.ಯು.ಸಿ ಅಥವಾ ತತ್ಸಮಾನ ಅಂಕಪಟ್ಟಿ ಪ್ರತಿ. ಪದವಿ ಅಂಕಪಟ್ಟಿ ಪ್ರತಿ, (ಎಲ್ಲಾ ವರ್ಷಗಳ ಅಥವಾ ಎಲ್ಲಾ ಸೆಮಿಸ್ಟರ್‍ಗಳು). ಆಧಾರ್ ಕಾರ್ಡ್ ಜೆರಾಕ್ಸ್. ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ಹೋಲ್ಡರ್ ಹೆಸರು, ಬ್ಯಾಂಕ್‍ನ ಹೆಸರು, ಐಎಫ್‍ಎಸ್‍ಸಿ ಕೋಡ್. ನಾಲ್ಕು ಫೋಟೋಗಳು. ದೂರವಾಣಿ ಸಂಖ್ಯೆ, ವಿದ್ಯಾರ್ಥಿ ಇ-ಮೇಲ್ ಐಡಿ, ಬಿಪಿಎಲ್ ಕಾರ್ಡ್ (ಮಹಿಳೆಯರಿಗೆ ಮಾತ್ರ), ಎಟಿಎಂ ಕಾರ್ಡ್/ ಫೆÇೀನ್ ಪೇ / ಗೂಗಲ್ ಪೇ / ನೆಟ್ ಬ್ಯಾಂಕಿಂಗ್ – ಶುಲ್ಕ ಪಾವತಿಗಾಗಿ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಪ್ರಾದೇಶಿಕ ನಿರ್ದೇಶಕರು 9901423273, 9483570900, 8296215714, 9844395986, ಮಡಿಕೇರಿ ಜೂನಿಯರ್ ಕಾಲೇಜು ಆವರಣದ ಭವನದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಅರುಣ್ ಕುಮಾರ್ ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular