HomeBusinessಚಿನ್ನಾಭರಣ ಖರೀದಿದಾರರಿಗೆ ಶಾಕ್: ಸತತ ಮೂರನೇ ದಿನವೂ ಏರಿಕೆ ಕಂಡ ಚಿನ್ನದ ದರ 66,420 ರೂ.

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಸತತ ಮೂರನೇ ದಿನವೂ ಏರಿಕೆ ಕಂಡ ಚಿನ್ನದ ದರ 66,420 ರೂ.

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ರಾಜಧಾನಿ ದೆಹಲಿ ಚಿನಿವಾರ ಪೇಟೆಯಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 500 ರೂಪಾಯಿ ಹೆಚ್ಚಳವಾಗಿದ್ದು, 60,900 ರೂ.ಗೆ ತಲುಪಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ದರ 10 ಗ್ರಾಂಗೆ 540 ರೂ. ಹೆಚ್ಚಳವಾಗಿದ್ದು 66,420 ರೂಪಾಯಿಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 200 ರೂಪಾಯಿ ಹೆಚ್ಚಳವಾಗಿದ್ದು, 75,700 ರೂಪಾಯಿಗೆ ತಲುಪಿದೆ.

ಚಿನ್ನದ ಜೊತೆಗೆ ಪ್ಲಾಟಿನಮ್ ನಂತಹ ಅಮೂಲ್ಯ ಲೋಹಗಳ ದರ ಕೂಡ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 6075 ರೂ., 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 6627 ರೂಪಾಯಿಗೆ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಗತಿಕ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಾಣುತ್ತಿದೆ. ಚಿನ್ನದ ಮೇಲಿನ ಹೂಡಿಕೆ, ಬೇಡಿಕೆ ಹೆಚ್ಚಾಗಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular