HomeIndiaಧನ್ ತೇರಾಸ್ ಗೆ ಚಿನ್ನಾಭರಣ ಖರೀದಿಗೆ ಹೆಚ್ಚಿದ ಬೇಡಿಕೆ: 10 ಗ್ರಾಂ ಚಿನ್ನಕ್ಕೀಗ 81400 ರೂ.

ಧನ್ ತೇರಾಸ್ ಗೆ ಚಿನ್ನಾಭರಣ ಖರೀದಿಗೆ ಹೆಚ್ಚಿದ ಬೇಡಿಕೆ: 10 ಗ್ರಾಂ ಚಿನ್ನಕ್ಕೀಗ 81400 ರೂ.

ನವದೆಹಲಿ: ಧನ್ ತೇರಾಸ್ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇದರ ಪರಿಣಾಮ ಚಿನ್ನದ ದರ 300 ರೂ. ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ದರ 10 ಗ್ರಾಂ ಗೆ 81,400 ರೂಪಾಯಿಗೆ ಮಾರಾಟವಾಗಿದೆ.

ಅದೇ ರೀತಿ ಬೆಳ್ಳಿಯ ದರ ಕೂಡ 200 ರೂಪಾಯಿ ಹೆಚ್ಚಳವಾಗಿದ್ದು, ಒಂದು ಕೆಜಿ ಶುದ್ದ ಬೆಳ್ಳಿ ದರ 99,700 ರೂ.ಗೆ ಮಾರಾಟವಾಗಿದೆ. ಕೈಗಾರಿಕೆಗಳು ಮತ್ತು ನಾಣ್ಯ ತಯಾರಿಕರಿಂದ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಬೆಳ್ಳಿಯ ದರ ಏರಿಕೆ ಕಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾರಣಕ್ಕೆ ಐರೋಪ್ಯ ದೇಶಗಳಲ್ಲಿ ಚಿನ್ನದ ವಹಿವಾಟು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ರಷ್ಯಾ –ಉಕ್ರೇನ್, ಇಸ್ರೇಲ್ –ಇರಾನ್, ಗಾಜಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ಚಿನ್ನದ ದರ ಏರುಗತಿಯಲ್ಲಿ ಸಾಗಿದೆ. ಹೂಡಿಕೆಗೆ ಸುರಕ್ಷಿತವೆಂದು ಜನ ಚಿನ್ನದ ಮೇಲೆ ಆಸಕ್ತಿ ತೋರಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular