ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳು ದೇಶೀಯ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳ ಮೇಲೆ ಭಾರಿ ಪ್ರಭಾವ ಬೀರಿವೆ. ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧದ ಉದ್ವಿಗ್ನತೆ ಸೃಷ್ಟಿಯಾಗಿರುವುದು ಜಾಗತಿಕ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಇದರಿಂದಾಗಿ ಹೂಡಿಕೆದಾರರ ಗಮನ ಈಗ ಚಿನ್ನ-ಬೆಳ್ಳಿಯ ಹೂಡಿಕೆಯಿಂದ ಬೇರೆಡೆಗೆ ತಿರುಗಿದ್ದು, ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು ಜುಲೈ 9ರ ಗುರುವಾರದ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಅಲ್ಪ ಏರಿಕೆಯಾಗಿದ್ದರೆ, ಬೆಳ್ಳಿಯ ದರದಲ್ಲಿ ಬರೋಬ್ಬರಿ 10,000 ರೂಪಾಯಿಗಳ ಭಾರಿ ಕುಸಿತ ಕಂಡುಬಂದಿದೆ ಇದು ಆಭರಣ ಪ್ರಿಯರಿಗೆ ಮತ್ತು ಬೆಳ್ಳಿ ಖರೀದಿದಾರರಿಗೆ ದೊಡ್ಡ ಆಫರ್ ಎನಿಸಿದೆ.
ಇಂದಿನ ಚಿನ್ನದ ದರ ಪಟ್ಟಿ (Gold Rates Today):
ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆ ಕಂಡಿದ್ದ ಬಂಗಾರದ ದರ ಇಂದು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ದೇಶದ ಪ್ರಮುಖ ನಗರಗಳ ಇಂದಿನ ಸರಾಸರಿ ದರ ಹೀಗಿದೆ:
ಚಿನ್ನದ ಶುದ್ಧತೆ 1 ಗ್ರಾಂ ಬೆಲೆ10 ಗ್ರಾಂ ಬೆಲೆ
22 ಕ್ಯಾರೆಟ್ ಆಭರಣ ಚಿನ್ನ₹13,130 (₹10 ಏರಿಕೆ)₹1,31,300 (₹100 ಏರಿಕೆ)
24 ಕ್ಯಾರೆಟ್ ಅಪರಂಜಿ ಚಿನ್ನ₹14,324 (₹11 ಏರಿಕೆ)₹1,43,240 (₹110 ಏರಿಕೆ)
18 ಕ್ಯಾರೆಟ್ ಚಿನ್ನ₹10,743₹1,07,430
ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯ ತೆರಿಗೆಗಳು ಹಾಗೂ ಮಾರುಕಟ್ಟೆ ವಹಿವಾಟಿನ ಹಿನ್ನೆಲೆಯಲ್ಲಿ ದೇಶದ ಸರಾಸರಿ ದರಕ್ಕಿಂತ ತುಸು ಹೆಚ್ಚಿನ ಬೆಲೆ ದಾಖಲಾಗಿದೆ.
ಬೆಂಗಳೂರಲ್ಲಿ ಶುದ್ಧ ಚಿನ್ನದ (24 ಕ್ಯಾರೆಟ್) ಗ್ರಾಂ ಬೆಲೆ: ₹14,526
ಬೆಂಗಳೂರಲ್ಲಿ ಇಂದಿನ ಬೆಳ್ಳಿ ಗ್ರಾಂ ಬೆಲೆ: ₹235
10 ಸಾವಿರ ರೂ. ಅಗ್ಗವಾದ ಬೆಳ್ಳಿ
ಈ ವಾರದ ಆರಂಭದಿಂದಲೂ ಬಹುತೇಕ ಸ್ಥಿರವಾಗಿದ್ದ ಬೆಳ್ಳಿಯ ದರ ಇಂದು ಗ್ರಾಹಕರಿಗೆ ಬಿಗ್ ಶಾಕ್ ನೀಡುವಂತೆ ಭಾರಿ ಕುಸಿತ ಕಂಡಿದೆ. ಇಂದು ಒಂದೇ ದಿನ ಕೆಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ ₹10,000 ಇಳಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ ₹2,35,000 ತಲುಪಿದ್ದು, ಹೂಡಿಕೆ ಮಾಡಲು ಅಥವಾ ಹೊಸದಾಗಿ ಬೆಳ್ಳಿ ಆಭರಣ ಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,43,240
ನಾಗ್ಪುರ ₹1,43,240
ಮುಂಬೈ ₹1,43,240
ಚೆನ್ನೈ ₹1,44,220
ಕೋಲ್ಕತ್ತಾ ₹1,43,240
ಪಾಟ್ನಾ ₹1,43,290
ಸೂರತ್ ₹1,43,290
ಚಂಡೀಗಢ ₹1,43,390
ಲಕ್ನೋ ₹1,43,390

