HomeBusinessಚಿನ್ನ ಖರೀದಿದಾರರಿಗೆ ಬಂಪರ್ ಸುದ್ದಿ 10 ಗ್ರಾಂ ಚಿನ್ನ ₹2,650 ಇಳಿಕೆ, ಜೂನ್ ತಿಂಗಳಲ್ಲೇ ಬರೋಬ್ಬರಿ...

ಚಿನ್ನ ಖರೀದಿದಾರರಿಗೆ ಬಂಪರ್ ಸುದ್ದಿ 10 ಗ್ರಾಂ ಚಿನ್ನ ₹2,650 ಇಳಿಕೆ, ಜೂನ್ ತಿಂಗಳಲ್ಲೇ ಬರೋಬ್ಬರಿ 16,090 ರೂ ಇಳಿಕೆ: ಬೆಳ್ಳಿ ದರವೂ ಕಡಿಮೆ

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಪ್ಲಾನ್‌ನಲ್ಲಿದ್ದವರಿಗೆ ಇಂದು ಬಿಗ್ ರಿಲೀಫ್ ಸಿಕ್ಕಿದೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಬಂಗಾರದ ಬೆಲೆ ಇಂದು ಬರೋಬ್ಬರಿ 1,800 ರೂ. ಇಳಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆ ಜೂನ್ ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಕಳೆದ 8 ತಿಂಗಳ ಹಿಂದಿನ ದರಕ್ಕೆ ಮರಳಿದಂತಾಗಿದೆ

ಕೇವಲ ಈ ಒಂದು ತಿಂಗಳ ಅವಧಿಯಲ್ಲೇ ಚಿನ್ನದ ಬೆಲೆಯಲ್ಲಿ ಒಟ್ಟು 16,090 ರೂ. ನಷ್ಟು ಭಾರಿ ಇಳಿಕೆ ದಾಖಲಾಗಿದೆ. ಇದರ ಜೊತೆಗೆ ಬೆಳ್ಳಿ ಬೆಲೆಯೂ ಕೂಡ ಇಂದು ಬರೋಬ್ಬರಿ 5,000 ರೂ. ನಷ್ಟು ಇಳಿಕೆಯಾಗಿದೆ

ಬೆಂಗಳೂರು ಸೇರಿದಂತೆ ದೇಶಾದ್ಯಂತ ಇಂದಿನ ಚಿನ್ನದ ದರಗಳು (ಜೂನ್ 30, 2026):

24 ಕ್ಯಾರೆಟ್ ಶುದ್ಧ ಚಿನ್ನ (ಅಪರಂಜಿ):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಗ್ರಾಂ ಬೆಲೆ: 180 ರೂ. ಇಳಿಕೆಯಾಗಿದ್ದು, ಈಗ 14,013 ರೂ. ಆಗಿದೆ.

10 ಗ್ರಾಂ ಬೆಲೆ: 1,800 ರೂ. ಇಳಿಕೆಯಾಗಿದ್ದು, ಈಗ 1,40,130 ರೂ. ದಾಖಲಾಗಿದೆ.

22 ಕ್ಯಾರೆಟ್ ಆಭರಣ ಚಿನ್ನ:

1 ಗ್ರಾಂ ಬೆಲೆ: 165 ರೂ. ಇಳಿಕೆಯಾಗಿದ್ದು, ಈಗ 12,845 ರೂ. ಆಗಿದೆ.

10 ಗ್ರಾಂ ಬೆಲೆ: 1,650 ರೂ. ಇಳಿಕೆಯಾಗಿದ್ದು, ಈಗ 1,28,450 ರೂ. ದಾಖಲಾಗಿದೆ.
(ಈ ಮೂಲಕ ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 13,000 ರೂ. ಗಡಿಯೊಳಗೆ ಬಂದಿದೆ).

18 ಕ್ಯಾರೆಟ್ ಚಿನ್ನ:

1 ಗ್ರಾಂ ಬೆಲೆ: ಇವತ್ತು 10,510 ರೂ. ತಲುಪಿದೆ.

ಬೆಳ್ಳಿಯ ಇಂದಿನ ದರ ಹೀಗಿದೆ:

1 ಗ್ರಾಂ ಬೆಳ್ಳಿ ಬೆಲೆ: 235 ರೂ.

100 ಗ್ರಾಂ ಬೆಳ್ಳಿ ಬೆಲೆ: 23,500 ರೂ.
(ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ 23,500 ರೂ. ಇದ್ದರೆ, ತಮಿಳುನಾಡು ಮತ್ತು ಕೇರಳದ ಕೆಲವೆಡೆ 24,500 ರೂ. ನಷ್ಟಿದೆ).

ಸತತ ಎರಡನೇ ದಿನವೂ ಇಳಿಕೆ ಕಂಡಿರುವ ಚಿನ್ನದ ದರ ಜಾಗತಿಕ ಮಾರುಕಟ್ಟೆಯಲ್ಲೂ ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 14,000 ರೂ. ಮಟ್ಟಕ್ಕಿಂತ ಕೆಳಗಿಳಿಯುವ ಸನ್ನಾಹದಲ್ಲಿದ್ದು, ಗ್ರಾಹಕರಿಗೆ ಒಟ್ಟಾರೆಯಾಗಿ ಇದು ಖರೀದಿಗೆ ಪರ್ಫೆಕ್ಟ್ ಟೈಮ್ ಆಗಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular