ನವದೆಹಲಿ: ಚಿನ್ನ ಖರೀದಿಸುವ ಯೋಚನೆಯಲ್ಲಿದ್ದ ಗ್ರಾಹಕರಿಗೆ ನಿರಾಳ ಸುದ್ದಿ ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಎರಡನೇ ದಿನವೂ ಇಳಿಕೆ ಕಂಡಿದೆ. ಕಳೆದ ವಾರದ ಕೊನೆಯಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದ ಬಂಗಾರದ ದರದಲ್ಲಿ ಇದೀಗ ಮತ್ತೆ ಕರೆಕ್ಷನ್ (Correction) ಪ್ರಕ್ರಿಯೆ ಆರಂಭವಾಗಿದ್ದು, ಮಂಗಳವಾರದ ಬೆನ್ನಲ್ಲೇ ಬುಧವಾರವೂ ಚಿನ್ನ ಅಗ್ಗವಾಗಿದೆ.ನಿನ್ನೆ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಇಳಿಕೆಯಾಗಿದ್ದರೆ, ಇಂದು (ಜೂನ್ 17) ಮತ್ತೆ 25 ರೂಪಾಯಿ ಕಡಿಮೆಗೊಂಡಿದೆ. ಈ ಮೂಲಕ ಕೇವಲ ಎರಡು ದಿನಗಳಲ್ಲಿ ಚಿನ್ನದ ದರ ಪ್ರತಿ ಗ್ರಾಮ್‌ಗೆ 40 ರೂಪಾಯಿ ಇಳಿದಂತಾಗಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹೆಚ್ಚಳವಾಗುತ್ತಿದ್ದರೂ ಭಾರತದಲ್ಲಿ ಮಾತ್ರ ದರ ತಗ್ಗಿರುವುದು ವಿಶೇಷ. ಇತ್ತ ಬೆಳ್ಳಿ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣದೆ ಸ್ಥಿರತೆ ಕಾಯ್ದುಕೊಂಡಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರಗಳು:
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಹಳದಿ ಲೋಹ ಹಾಗೂ ಬೆಳ್ಳಿಯ ಅಧಿಕೃತ ದರಗಳ ವಿವರ ಈ ಕೆಳಗಿನಂತಿದೆ:
ಲೋಹದ ಪ್ರಕಾರ ಇಂದಿನ ದರ (Today’s Rate)
22 ಕ್ಯಾರಟ್ ಚಿನ್ನ (ಪ್ರತಿ 10 ಗ್ರಾಮ್)₹ 1,38,500
24 ಕ್ಯಾರಟ್ ಅಪರಂಜಿ ಚಿನ್ನ (ಪ್ರತಿ 10 ಗ್ರಾಮ್)₹ 1,51,100
ಬೆಳ್ಳಿ (ಪ್ರತಿ 100 ಗ್ರಾಮ್)₹ 26,500
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಂಗಳೂರಿನ ಗ್ರಾಹಕರಿಗೂ ಇಂದಿನ ದರ ಇಳಿಕೆ ಅನ್ವಯಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹ 1,38,500 ಆಗಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ 100 ಗ್ರಾಮ್‌ಗೆ ₹ 26,500 ರಲ್ಲೇ ಮುಂದುವರಿದಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,51,100
ನಾಗ್ಪುರ ₹1,51,100
ಮುಂಬೈ ₹1,51,100
ಚೆನ್ನೈ ₹1,53,060
ಕೋಲ್ಕತ್ತಾ ₹1,51,100
ಪಾಟ್ನಾ ₹1,51,150
ಸೂರತ್ ₹1,51,150
ಚಂಡೀಗಢ ₹1,51,250
ಲಕ್ನೋ ₹1,51,250

