HomeBusinessಬಜೆಟ್ ಬೆನ್ನಲ್ಲೇ ಬಂಗಾರದ ಬಂಪರ್ ಆಫರ್: 100 ಗ್ರಾಂ ಚಿನ್ನದ ಬೆಲೆ ₹7,700 ಇಳಿಕೆ

ಬಜೆಟ್ ಬೆನ್ನಲ್ಲೇ ಬಂಗಾರದ ಬಂಪರ್ ಆಫರ್: 100 ಗ್ರಾಂ ಚಿನ್ನದ ಬೆಲೆ ₹7,700 ಇಳಿಕೆ

ಬೆಂಗಳೂರು: ಇನ್ನೇನು ಯುಗಾದಿ ಹೊಸ ವರ್ಷದ ಸಂಭ್ರಮ ಶುರುವಾಗುತ್ತಿದೆ, ಅತ್ತ ರಂಜಾನ್ ಹಬ್ಬವೂ ಹತ್ತಿರದಲ್ಲಿದೆ. ಇಂತಹ ಹಬ್ಬಗಳ ಸರಣಿಯ ನಡುವೆಯೇ ಚಿನ್ನದ ಪ್ರಿಯರಿಗೆ ಒಂದು ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇಂದು ಕೊಂಚ ತಣ್ಣಗಾಗಿದ್ದು, ಗ್ರಾಹಕರಿಗೆ ನಿರಾಳ ತಂದಿದೆ.

ಹಬ್ಬದ ಆಫರ್ ಜೊತೆ ದರ ಇಳಿಕೆಯ ಲಾಭ

ಭಾರತದಲ್ಲಿ ಹಬ್ಬಗಳ ಸಮಯದಲ್ಲಿ ಚಿನ್ನ ಖರೀದಿಸುವುದು ಕೇವಲ ಸಂಪ್ರದಾಯವಲ್ಲ, ಅದೊಂದು ಭಾವನೆ. ಅದರಲ್ಲೂ ಮಹಿಳೆಯರಿಗಂತೂ ಒಡವೆ ಮಾಡಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಸಡಗರ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಸ್ರೇಲ್‌, ಅಮೆರಿಕಾ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ಇಡೀ ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ. ಕಚ್ಚಾ ತೈಲ ಬೆಲೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತದಿಂದಾಗಿ ಚಿನ್ನದ ದರ ಸ್ಥಿರವಾಗಿಲ್ಲ. ನಿನ್ನೆ ಬೆಲೆ ಇಳಿಕೆಯಾದರೆ ಇಂದು ಏರಿಕೆಯಾಗುವ ಭಯ ಖರೀದಿದಾರರಲ್ಲಿದೆ. ಆದರೆ, ಇಂದು ಚಿನ್ನದ ದರ ಇಳಿಕೆ ಕಂಡುಬಂದಿದ್ದು ಬೆಳ್ಳಿ ದರ ಕೂಡ ಸ್ಥಿರವಾಗಿರುವುದು ಸಮಾಧಾನಕರ ಸಂಗತಿ.

ಭಾರತದಲ್ಲಿ 24K ಚಿನ್ನದ ಬೆಲೆ:

1 ಗ್ರಾಂ ಚಿನ್ನ: ₹16,211

10 ಗ್ರಾಂ ಚಿನ್ನ:₹1,62,110

100 ಗ್ರಾಂ ಚಿನ್ನ : ₹16,21,100

1 ಕಿಲೋಗ್ರಾಂ ಬೆಳ್ಳಿ ಬೆಲೆ:2,85,000

ನಗರವಾರು 24K (24 ಕ್ಯಾರೆಟ್) ಚಿನ್ನದ ಬೆಲೆ

ನಗರ 24K ಚಿನ್ನದ ಬೆಲೆ (ರೂ.)

ಚೆನ್ನೈ 16,320

ಮುಂಬೈ 16,211

ದೆಹಲಿ 16,226

ಕೋಲ್ಕತ್ತಾ 16,211

ಬೆಂಗಳೂರು 16,211

ಹೈದರಾಬಾದ್ 16,211

ಕೇರಳ 16,211

ಪುಣೆ 16,211

ವಡೋದರಾ 16,216

ಅಹಮದಾಬಾದ್ 16,216

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular