ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಿಂದ ಕಂಗಾಲಾಗಿದ್ದ ಜನ ಸಾಮಾನ್ಯರಿಗೆ ಇಂದು ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಸತತ ಏರಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇಂದು (ಜನವರಿ 22, 2026) ದಿಢೀರ್ ಇಳಿಕೆ ಕಾಣುವ ಮೂಲಕ ಆಭರಣ ಖರೀದಿದಾರರಲ್ಲಿ ಮಂದಹಾಸ ಮೂಡಿಸಿದೆ.ಪ್ರತಿ ಗ್ರಾಮ್ ಚಿನ್ನದ ಬೆಲೆ ₹45 ರಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲೂ ಪ್ರತಿ ಗ್ರಾಮ್ಗೆ ₹5 ರಷ್ಟು ಅಲ್ಪ ಕುಸಿತ ದಾಖಲಾಗಿದೆ. ಸತತ ಏರಿಕೆಯ ನಂತರ ಉಂಟಾಗಿರುವ ಈ ಇಳಿಕೆಯು ಗ್ರಾಹಕರಲ್ಲಿ ಸಣ್ಣ ಭರವಸೆ ಮೂಡಿಸಿದೆ.
ಚಿನ್ನದ ದರದಲ್ಲಿ ಇಳಿಕೆ:
ಭಾರತೀಯರು ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರು ಚಿನ್ನದ ಮೇಲೆ ಅತಿಯಾದ ವ್ಯಾಮೋಹ ಮತ್ತು ಹೂಡಿಕೆ ಮಾಡುತ್ತಾರೆ. ಬುಧವಾರದವರೆಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಇಂದು ಅನಿರೀಕ್ಷಿತವಾಗಿ ಕೂಲ್ ಆಫ್ ಆಗಿದೆ. ಮದುವೆ ಸೀಸನ್ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯಕ್ಕೆ ದಾರಿ ಮಾಡಿಕೊಟ್ಟಿದೆ.
ಬೆಳ್ಳಿಯಲ್ಲೂ ಭಾರೀ ಕುಸಿತ: ಕೆಜಿಗೆ 5,000 ರೂ. ಕಮ್ಮಿ
ಚಿನ್ನದ ಬೆಲೆ ಇಳಿಕೆಯ ಜೊತೆಜೊತೆಗೆ ಬೆಳ್ಳಿಯ ಬೆಲೆಯೂ ಕೂಡ ನೆಲಕಚ್ಚಿದೆ. ಇಂದು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 5,000 ರೂಪಾಯಿ ಅಗ್ಗವಾಗಿದೆ. ಇದು ಹೂಡಿಕೆದಾರರಿಗೆ ಮತ್ತು ಬೆಳ್ಳಿ ಆಭರಣ ಕೊಳ್ಳುವವರಿಗೆ ಬಂಪರ್ ಆಫರ್ನಂತಾಗಿದೆ.
ಬೆಲೆ ಇಳಿಕೆಗೆ ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಕಳೆದ ಕೆಲವು ಸೆಷನ್ಗಳಲ್ಲಿ ಕಂಡುಬಂದ ಅತಿಯಾದ ಲಾಭ ಗಳಿಕೆಯ ನಂತರ ಮಾರುಕಟ್ಟೆ ಈಗ ಸ್ಥಿರತೆಯತ್ತ ಮುಖ ಮಾಡಿದೆ. ಹೂಡಿಕೆದಾರರ ಧೋರಣೆಯಲ್ಲಿನ ಬದಲಾವಣೆ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,573 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,54,310
ನಾಗ್ಪುರ ₹1,54,310
ಮುಂಬೈ ₹1,54,310
ಚೆನ್ನೈ ₹1,54,910
ಕೋಲ್ಕತ್ತಾ ₹1,54,310
ಪಾಟ್ನಾ ₹1,54,360
ಸೂರತ್ ₹1,54,360
ಚಂಡೀಗಢ ₹1,54,460
ಲಕ್ನೋ ₹1,54,460

