HomeBusinessಇಸ್ರೇಲ್-ಲೆಬನಾನ್ ಯುದ್ಧದ ಎಫೆಕ್ಟ್ :ಒಂದೇ ದಿನದಲ್ಲಿ ₹2,340 ಕುಸಿತ ಕಂಡ ಚಿನ್ನ

ಇಸ್ರೇಲ್-ಲೆಬನಾನ್ ಯುದ್ಧದ ಎಫೆಕ್ಟ್ :ಒಂದೇ ದಿನದಲ್ಲಿ ₹2,340 ಕುಸಿತ ಕಂಡ ಚಿನ್ನ

ಬೆಂಗಳೂರು: ಜಾಗತಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಬುಧವಾರ ಬರೋಬ್ಬರಿ 3,980 ರೂಪಾಯಿ ಏರಿಕೆಯಾಗಿ ಆತಂಕ ಸೃಷ್ಟಿಸಿದ್ದ ಚಿನ್ನದ ದರ, ಇಂದು ಗುರುವಾರ (ಏಪ್ರಿಲ್ 9) 2,340 ರೂಪಾಯಿಗಳಷ್ಟು ಇಳಿಕೆ ಕಂಡು ಗ್ರಾಹಕರಿಗೆ ತುಸು ನಿಮ್ಮದಿ ನೀಡಿದೆ.

ಇಂದಿನ ಲೇಟೆಸ್ಟ್ ದರಪಟ್ಟಿ ಹೀಗಿದೆ:

24 ಕ್ಯಾರೆಟ್ ಚಿನ್ನ (ಅಪರಂಜಿ): 10 ಗ್ರಾಂಗೆ 1,51,480 ರೂ. (ಇಂದು 2,340 ರೂ. ಇಳಿಕೆ).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ಕ್ಯಾರೆಟ್ ಚಿನ್ನ (ಆಭರಣ): 10 ಗ್ರಾಂಗೆ 1,38,850 ರೂ. (200 ರೂ. ಗಿಂತ ಹೆಚ್ಚು ಕುಸಿತ).

ಬೆಳ್ಳಿ ದರ: ಪ್ರತಿ 100 ಗ್ರಾಂಗೆ 25,500 ರೂ. (ಇಂದು 5 ರೂ. ಇಳಿಕೆ).

ಬೆಲೆ ಇಳಿಕೆಗೆ ಕಾರಣವೇನು? ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದರೂ, ಇಸ್ರೇಲ್-ಲೆಬನಾನ್ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇದು ಹೂಡಿಕೆದಾರರ ಮೇಲೆ ಒತ್ತಡ ಸೃಷ್ಟಿಸಿದ್ದು, ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಬದಲಾವಣೆಯಾಗಿದೆ. ನೀವು ಇಂದು ಆಭರಣ ಖರೀದಿಸುವ ಪ್ಲಾನ್ ಮಾಡಿದ್ದರೆ, ಲೇಟೆಸ್ಟ್ ದರಪಟ್ಟಿ ಇಲ್ಲಿದೆ:

24 ಕ್ಯಾರೆಟ್ (ಅಪ್ಪಟ ಚಿನ್ನ): 1 ಗ್ರಾಂಗೆ ₹15,148

22 ಕ್ಯಾರೆಟ್ (ಆಭರಣ ಚಿನ್ನ): 1 ಗ್ರಾಂಗೆ ₹13,885

18 ಕ್ಯಾರೆಟ್ (ಸಣ್ಣ ಆಭರಣಗಳು): 1 ಗ್ರಾಂಗೆ ₹11,361

ಬೆಳ್ಳಿ ದರ: 1 ಗ್ರಾಂಗೆ ₹255 (ಪ್ರತಿ ಕೆಜಿಗೆ ₹2,55,000)

24 ಕ್ಯಾರಟ್ ಬಂಗಾರದ ಇಂದಿನ ದರ (ನಗರವಾರು)

ಚೆನ್ನೈ – ₹15,273

ಮುಂಬೈ – ₹15,148

ದೆಹಲಿ – ₹15,163

ಕೋಲ್ಕತ್ತಾ – ₹15,148

ಬೆಂಗಳೂರು – ₹15,148

ಹೈದರಾಬಾದ್ – ₹15,148

ಕೇರಳ – ₹15,148

ಪುಣೆ – ₹15,148

ವಡೋದರಾ – ₹15,153

ಅಹಮದಾಬಾದ್ – ₹15,153

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular