ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿ ಬೆಲೆ ಇಳಿಕೆ

ಭಾರತದಲ್ಲಿ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು ಚಿನ್ನಾಭರಣ ಪ್ರಿಯರಿಗೆ ಆಘಾತ ಎದುರಾಗಿದೆ. ಪ್ರತಿ ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ ಪ್ರತಿದಿನ ಚಿನ್ನದ ಬೆಲೆಗಳನ್ನು ಟ್ರ್ಯಾಕ್​ ಮಾಡುವಂತಹ ಗುಡ್​ ರಿಟರ್ನ್ಸ್​​​ ನೀಡಿರುವ ಮಾಹಿತಿಯ ಪ್ರಕಾರ, 22 ಕ್ಯಾರಟ್​​ ಒಂದು ಗ್ರಾಂ ಚಿನ್ನದ ದರ 5,415 ರೂಪಾಯಿ ಆಗಿದೆ. ಹಾಗೂ 24 ಕ್ಯಾರಟ್​ ಚಿನ್ನದ ದರ ಪ್ರತಿ ಗ್ರಾಂಗೆ 5,906 ರೂಪಾಯಿ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್​ ಹಾಗೂ 24 ಕ್ಯಾರಟ್​ 10 ಗ್ರಾಂ ಚಿನ್ನದ ದರ ಕ್ರಮವಾಗಿ 54,300 ರೂಪಾಯಿ ಹಾಗೂ 59,220 ರೂಪಾಯಿ ಆಗಿದೆ, ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರಟ್​ ಮತ್ತು 24 ಕ್ಯಾರಟ್​​ ಚಿನ್ನದ ದರ ಕ್ರಮವಾಗಿ 54,150 ರೂಪಾಯಿ ಹಾಗೂ 59,060 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ 22 ಕ್ಯಾರಟ್ ಚಿನ್ನದ ದರ 54,520 ರೂಪಾಯಿ ಹಾಗೂ ಕೋಲ್ಕತ್ತಾದಲ್ಲಿ 22 ಕ್ಯಾರಟ್ ಚಿನ್ನದ ದರ 54,150 ರೂಪಾಯಿ ಆಗಿದೆ.

ಆದರೆ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಕೆಜಿಗೆ 200 ರೂಪಾಯಿ ಕಡಿಮೆಯಾಗಿದೆ. ಗುಡ್​ ರಿರ್ಟನ್ಸ್​​ ನೀಡಿರುವ ಮಾಹಿತಿಯ ಪ್ರಕಾರ , ಒಂದು ಕೆಜಿ ಬೆಳ್ಳಿಯ ದರ 71 ಸಾವಿರ ರೂಪಾಯಿ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆಯನ್ನು ಕರೆನ್ಸಿ, ವಿವಿಧ ಅಂತಾರಾಷ್ಟ್ರೀಯ ಅಂಶಗಳು ಹಾಗೂ ಸರ್ಕಾರದ ನೀತಿಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read