ಇಬ್ಬರು ಸವಾರರಿದ್ಧರೆ ಈ ಎಲೆಕ್ಟ್ರಿಕ್ ಸ್ಕೂಟರ್‌ ಚಲಿಸುವುದೇ ಇಲ್ಲ….!

ಒಂದೇ ಸಾಧನದಲ್ಲಿ ಒಬ್ಬರಿಗಿಂತ ಹೆಚ್ಚಿನ ಸವಾರರು ಹೋಗುವುದನ್ನು ತಪ್ಪಿಸಲು ಇ-ಸ್ಕೂಟರ್‌ ಶೇರಿಂಗ್ ಕಂಪನಿಗಳು ಬಹಳಷ್ಟು ರೀತಿಯ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ಈ ಬಗ್ಗೆ ಸಾಕಷ್ಟು ಕಠಿಣ ನಿಯಮಗಳಿವೆ. ಇ-ಸ್ಕೂಟರ್‌‌ ಸವಾರಿ ಮಾಡಲು ಕನಿಷ್ಠ 12 ವರ್ಷ ವಯಸ್ಸಾಗಿರಬೇಕು ಹಾಗೂ ಗಂಟೆಗೆ 25ಕಿಮೀ ವೇಗದ ಮಿತಿ ಇರಬೇಕೆಂಬ ನಿಯಮಗಳನ್ನು ಮಾಡಲಾಗಿದೆ. ಜೊತೆಗೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋದಲ್ಲಿ €35 ದಂಡ ವಿಧಿಸುವ ಸಾಧ್ಯತೆಯೂ ಇದೆ.

ಅದೇನೇ ನಿಯಮಗಳನ್ನು ತಂದರೂ ಕೆಲವೊಮ್ಮೆ ಸವಾರರು ತಮ್ಮೊಂದಿಗೆ ಹಿಂಬದಿಯಲ್ಲಿ ಬೇರೊಬ್ಬರನ್ನು ಕೂರಿಸಿಕೊಂಡು ಹೋಗುವುದನ್ನು ತಪ್ಪಿಸಲು ಸಾಧ್ಯವಾಗದ ಕಾರಣ ಪ್ಯಾರಿಸ್‌ನ ಆಟೋನೊಮಿ ಮೊಬಿಲಿಟಿ ವರ್ಲ್ಡ್ಸ್ ಎಕ್ಸ್ಪೋದಲ್ಲಿ ಈ ಕುರಿತು ಹೊಸ ಐಡಿಯಾವೊಂದು ಸದ್ದು ಮಾಡಿದೆ.

ಇ-ಸ್ಕೂಟರ್‌ಗಳಿಗೆ ವೇಗದ ಮಿತಿ ಪ್ರೋಗ್ರಾಂ ಮಾಡಿದರೂ ಸಹ ಇಬ್ಬಿಬ್ಬರು ಸವಾರರು ಓಡಿಸುವುದನ್ನು ತಪ್ಪಿಸಲು ಹೀಗೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ವಿಚಾರವಾಗಿ ತಾಂತ್ರಿಕ ಪರಿಪಹಾರಗಳನ್ನು ವಿನ್ಯಾಸಗೊಳಿಸಿ, ಇಬ್ಬರು ಸವಾರರು ಕುಳಿತ ಕೂಡಲೇ ಇ-ಸ್ಕೂಟರ್‌ನ ಕಾರ್ಯಾಚರಣೆಗಳನ್ನು ಬ್ಲಾಕ್ ಮಾಡಲಾಗುವುದು.

ಪ್ಯಾರಿಸ್‌ನ ಆಟೋ ಎಕ್ಸ್ಪೋದಲ್ಲಿ ಭಾಗಿಯಾಗಿದ್ದ ಅಮೆರಿಕದ ನಿರ್ವಾಹಕ ಲೈಮ್ ಇಬ್ಬರು ಸವಾರರು ಇ-ಸ್ಕೂಟರ್‌‌ ಚಾಲನೆ ಮಾಡುವುದನ್ನು ಪತ್ತೆ ಮಾಡಲು ಹೊಸ ತಂತ್ರಾಂಶ ಕಂಡು ಹಿಡಿದಿದೆ. ಆನ್‌-ಬೋರ್ಡ್ ಸೆನ್ಸರ್‌ಗಳಿಂದಾಗಿ ಈ ಆವಿಷ್ಕಾರ ಸಾಧ್ಯವಾಗಿದೆ. ವಾಹನದ ವೇಗೋತ್ಕರ್ಷ, ಚಲಿಸುತ್ತಿರುವ ಕೋನ, ದಿಢೀರ್‌ ಎಂದು ಬದಲಾಗುವ ತೂಕವನ್ನು ಪತ್ತೆ ಮಾಡಬಹುದಾಗಿದೆ.

ಇಂಥ ಸಂದರ್ಭದಲ್ಲಿ ಬಳಕೆದಾರರಿಗೇ ನೇರ ನೋಟಿಸ್ ಕಳುಹಿಸಲಾಗುವುದು ಹಾಗೂ ವಾಹನದ ವೇಗ ತನ್ನಿಂತಾನೇ ತಗ್ಗುವುದು. ಮುಂದಿನ ತಿಂಗಳುಗಳಲ್ಲಿ ತನ್ನೆಲ್ಲಾ ಸ್ಕೂಟರ್‌ಗಳಿಗೂ ಇದೇ ತಂತ್ರಜ್ಞಾನ ವಿಸ್ತರಿಸುವುದಾಗಿ ಲೈಮ್ ತಿಳಿಸಿದೆ.

ಸಾಫ್ಟ್‌ ಮೊಬಿಲಿಟಿ ಕ್ಷೇತ್ರದಲ್ಲಿ ದಿಗ್ಗಜನಾಗಿರುವ ಲೈಮ್ ಜಗತ್ತಿನಾದ್ಯಂತ 250 ನಗರಗಳಲ್ಲಿ ಉಪಸ್ಥಿತವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read