HomeLatest Newsಮನೆಯಲ್ಲೆ ಸುಲಭವಾಗಿ ಮಾಡಿ ಗೋಬಿ ಮಂಚೂರಿ

ಮನೆಯಲ್ಲೆ ಸುಲಭವಾಗಿ ಮಾಡಿ ಗೋಬಿ ಮಂಚೂರಿ

ಸಂಜೆ ಸಮಯದಲ್ಲಿ ಏನಾದರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕು ಎನಿಸುವುದು ಸಹಜ. ಕ್ಯಾಬೇಜ್ ನಿಂದ ರುಚಿಕರವಾದ ಡ್ರೈ ಮಂಚೂರಿಯನ್ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ.

ಬೇಕಾಗುವ ಸಾಮಾಗ್ರಿಗಳು:

2 ಕಪ್ -ಕ್ಯಾಬೇಜ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಮೈದಾ ಹಿಟ್ಟು -1 ಕಪ್, ಕಡಲೇ ಹಿಟ್ಟು -3 ಟೇಬಲ್ ಸ್ಪೂನ್, ಹಸಿಮೆಣಸು -ಸಣ್ಣದ್ದಾಗಿ ಹಚ್ಚಿಕೊಂಡಿದ್ದು-2, 1 ಟೀ ಸ್ಪೂನ್ – ಗರಂ ಮಸಾಲಾ, ಕೊತ್ತಂಬರಿ ಸೊಪ್ಪು -1/4 ಕಪ್, ರೆಡ್ ಫುಡ್ ಕಲರ್ -ಚಿಟಿಕೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ -1 ಟೇಬಲ್ ಸ್ಪೂನ್, ಖಾರದ ಪುಡಿ -2 ಟೀ ಸ್ಪೂನ್, ಉಪ್ಪು -ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಕ್ಯಾಬೇಜ್, ಹಸಿಮೆಣಸು, ಖಾರದ ಪುಡಿ, ಫುಡ್ ಕಲರ್, ಗರಂ ಮಸಾಲ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

ನಂತರ 5 ಟೇಬಲ್ ಸ್ಪೂನ್ ಮೈದಾ ಹಿಟ್ಟು, ಕಡಲೇ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಡಿ. ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕರಿಯಿರಿ. ಸಾಸ್ ಜತೆ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular