ಮರಿ ಟಗರು – ದೈತ್ಯ ಗೂಳಿ ನಡುವೆ ಕಾಳಗ; ಗೆದ್ದಿದ್ದು ಯಾರು ? ವಿಡಿಯೋ ನೋಡಿ

ಮರಿ ಟಗರು ಹಾಗೂ ದೈತ್ಯಾಕಾರದ ಬೃಹತ್ ಗೂಳಿ ನಡುವಿನ ಕಾಳಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತನ್ನ ಪಾಡಿಗೆ ರಸ್ತೆ ಬದಿ ಮೇಯುತ್ತಿದ್ದ ಮರಿ ಟಗರಿಗೆ ದೈತ್ಯಾಕಾರದ ಗೂಳಿಯೊಂದು ಸುಮ್ಮನಿರಲಾರದೇ ಬಂದು ಡಿಚ್ಚಿ ಹೊಡೆದಿದೆ. ಗೂಳಿ ಗುದ್ದಿದ್ದೇ ತಡ ಮರಿ ಟಗರು ತನ್ನ ವರಸೆ ತೋರಿಸಿದ್ದು, ಟಗರು-ಗೂಳಿ ಕಾಳಗವೇ ಶುರುವಾಗಿದೆ.

ನಡುರಸ್ತೆಯಲ್ಲಿ ಆರಂಭವಾದ ಎರಡೂ ಪ್ರಾಣಿಗಳ ನಡುವಿನ ಯುದ್ಧ ಎಲ್ಲರನ್ನೂ ನಿಬ್ಬೆರಗಾಗಿಸುವಂತಿದೆ. ಬಲಿಷ್ಠವಾದ ಗೂಳಿ ತನ್ನ ಕೊಂಬಿನಿಂದ ಎತ್ತಿಬಿಸಾಕಿದರೂ ಕ್ಷಣಾರ್ಧದಲ್ಲಿ ಮೇಲೆದ್ದ ಟಗರು ಅಷ್ಟೇ ವೇಗದಲ್ಲಿ ಬಂದು ಗೂಳಿಗೆ ಗುದ್ದಿ ಹೋರಾಟ ನಡೆಸಿದೆ. ಗೂಳಿಯ ಹೊಡೆತಕ್ಕೆ ಕಿಂಚಿತ್ತೂ ಹೆದರದೇ ಛಲಬಿಡದ ಮರಿ ಟಗರು ದೈತ್ಯ ಗೂಳಿಯನ್ನು ತನ್ನ ಹಣೆಯಿಂದ ಗುದ್ದಿ ಸ್ಥಳದಿಂದ ಹಿಮ್ಮೆಟಿಸಿದೆ.

ದೈತ್ಯ ಗೂಳಿಯೊಂದಿಗೆ ಮರಿ ಟಗರಿನ ಹೋರಾಟದ ರೀತಿ ಎಂಥರಲ್ಲಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿದೆ. ಎದುರಾಳಿ ಎಷ್ಟೇ ಬಲಿಷ್ಠನಾಗಿರಲಿ ಯುದ್ಧ ಅಥವಾ ಕಾದಾಟಕ್ಕೆ ನಿಂತಾಗ ನಂಬಿಕೆ, ಆತ್ಮವಿಶ್ವಾಸವೊಂದಿದ್ದರೆ ಗೆಲುವು ನಮ್ಮದೇ ಎಂಬಂತೆ ಟಗರು ದೈತ್ಯಾಕಾರದ ಗೂಳಿಯನ್ನೇ ಹಿಮ್ಮೆಟ್ಟಿಸಿ ಓಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read