Viral Video | ಏನೋ ಮಾಡಲು ಹೋಗಿ ಏನು ಮಾಡಿದಿ ಮಾರಾಯ್ತಿ….? ಯುವತಿ ಫಜೀತಿಗೆ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಕೆಲವೊಮ್ಮೆ ಅತಿ ಕಾನ್ಫಿಡೆನ್ಸ್ ನಿಂದ ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತೆ ನೋಡಿ….. ಇಲ್ಲೋರ್ವ ಯುವತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸುಮ್ಮನೇ ನಡೆಯುವುದನ್ನು ಬಿಟ್ಟು ಕೆಳಗೆ ಬಿದ್ದಿದ್ದ ಬಾಟಲ್ ನ್ನು ಕಾಲಿನಿಂದ ಒದೆಯಲು ಹೋಗಿ ಪೇಚಿಗೆ ಸಿಲುಕಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನಕ್ಕು ನಗಿಸುವಂತಿದೆ. ಸಾಮಾನ್ಯವಾಗಿ ಬಹುತೇಕರಿಗೆ ಇಂತದ್ದೇ ಅನುಭವ ಖಂಡಿತ ಆಗಿರುತ್ತೆ.

ಕೆರೆಯ ದಡದಲ್ಲಿ ಯುವತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದಾಗ ದಡದಲ್ಲಿ ಬಿದ್ದಿದ್ದ ಜ್ಯೂಸ್ ಬಾಟಲ್ ನ್ನು ನೋಡಿದ್ದಾರೆ. ಅದನ್ನು ಕೈಯಿಂದ ಎತ್ತಿ ಕಸದ ಬುಟ್ಟಿಗೆ ಹಾಕುವುದನ್ನು ಬಿಟ್ಟು ಸಾಹಸ ಪ್ರದರ್ಶಿಸಲು ಹೋಗಿದ್ದಾಳೆ.

ಸುಮ್ಮನಿರಲಾರದೇ ಕಾಲಿನಿಂದ ಬಾಟಲ್ ನ್ನು ಒದ್ದು ಕೆರೆಗೆಸೆಯಲು ಹೋಗಿದ್ದಾರೆ. ಜೋರಾಗಿ ಕಾಲು ಬೀಸಿ ಬಾಟಲಿಯತ್ತ ಒದೆಯುತ್ತಿದ್ದಂತೆ ಬಾಟಲಿ ಬದಲು ಕಾಲಿನಲ್ಲಿದ್ದ ಶೂ ಕೆರೆಯ ಮಧ್ಯಭಾಗಕ್ಕೆ ಹೋಗಿ ಬಿದ್ದಿದೆ. ಇದೆಂಥಹ ಫಜೀತಿ ನೋಡಿ.

ಸದ್ಯ ಒಂದು ಶೂ ಆದ್ರೂ ಇದೆಯಲ್ಲ ಎಂಬಂತೆ ಒಂದೇ ಕಾಲಿನ ಶೂನೊಂದಿಗೆ ಮಹಿಳೆ ಪೇಚಾಗಿ ಮುಂದೆ ಸಾಗಿದ್ದಾಳೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ತಮಗೂ ಈ ರೀತಿಯ ಅನುಭವ ಆಗಿದ್ದನ್ನು ಮೆಲುಕು ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read