HomeLatest Newsಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಸಸಿಗಳನ್ನು ನೆಟ್ಟ ಐತಿಹಾಸಿಕ ಸಾಧನೆ: ಬೆಂಗಳೂರಿನ ಹಸಿರು ಅಭಿಯಾನಕ್ಕೆ ಜಾಗತಿಕ...

ಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಸಸಿಗಳನ್ನು ನೆಟ್ಟ ಐತಿಹಾಸಿಕ ಸಾಧನೆ: ಬೆಂಗಳೂರಿನ ಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ಮನ್ನಣೆ

ಬೆಂಗಳೂರು: ಜೂನ್ 27ರಂದು ಕೆಂಪೇಗೌಡ ಜಯಂತಿಯ ಶುಭ ಸಂದರ್ಭದಲ್ಲಿ ನಡೆದ ಬೃಹತ್ ಹಸಿರು ಅಭಿಯಾನದಲ್ಲಿ, “ಅತಿ ಕಡಿಮೆ ಅವಧಿಯಲ್ಲಿ (12 ಗಂಟೆಗಳಲ್ಲಿ) ವಿವಿಧ ಸ್ಥಳಗಳಲ್ಲಿ ತಂಡವೊಂದರಿಂದ ಅತಿ ಹೆಚ್ಚು ಸಸಿಗಳನ್ನು ನೆಟ್ಟ” ಐತಿಹಾಸಿಕ ಸಾಧನೆಗಾಗಿ ಜಾಗತಿಕ ಮನ್ನಣೆಯ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್’ ಪ್ರಮಾಣಪತ್ರವನ್ನು ನೀಡಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೊಂದಿಗೆ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

ಬಿಡಿಎ ಹಾಗೂ 50,000ಕ್ಕೂ ಹೆಚ್ಚು ಪರಿಸರ ಪ್ರೇಮಿಗಳ ಸಂಕಲ್ಪಕ್ಕೆ ಸಂದ ಜಯ ಇದು. ಈ ಐತಿಹಾಸಿಕ ಮಹತ್ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಕೈಜೋಡಿಸಿದ ಪ್ರತಿಯೊಬ್ಬ ನಾಗರಿಕರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಹಸಿರು ಮಿಷನ್‌ಗೆ ಗಿನ್ನೆಸ್ ಮನ್ನಣೆ. ಜೂನ್ 27 ರಂದು ಕೆಂಪೇಗೌಡ ಜಯಂತಿಯ ಶುಭ ಸಂದರ್ಭದಲ್ಲಿ ನಡೆದ ಮೆಗಾ ಗ್ರೀನ್ ಡ್ರೈವ್‌ನಲ್ಲಿ 12 ಗಂಟೆಗಳ ಒಳಗೆ ಒಂದೇ ತಂಡವು ಬಹು ಸ್ಥಳಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಟ್ಟ ನಮ್ಮ ಐತಿಹಾಸಿಕ ಸಾಧನೆಯನ್ನು ಗುರುತಿಸಿ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೊಂದಿಗೆ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಸ್ವೀಕರಿಸಲು ಸಂತೋಷವಾಯಿತು.

ಈ ಪ್ರತಿಷ್ಠಿತ ಮನ್ನಣೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾಮೂಹಿಕ ಸಂಕಲ್ಪ ಮತ್ತು ಈ ಅಸಾಧಾರಣ ಉಪಕ್ರಮವನ್ನು ಯಶಸ್ವಿಗೊಳಿಸಲು ಒಗ್ಗೂಡಿದ 50,000 ಕ್ಕೂ ಹೆಚ್ಚು ನಾಗರಿಕರ ಬದ್ಧತೆಗೆ ಗೌರವವಾಗಿದೆ. ಈ ಸಾಧನೆಯನ್ನು ಸಾಧ್ಯವಾಗಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಮ್ಮ ಹಂಚಿಕೆಯ ದೃಷ್ಟಿಕೋನವು ಬೆಂಗಳೂರನ್ನು ಮುಂದಿನ ಪೀಳಿಗೆಗೆ ಹಸಿರು, ಚೈತನ್ಯಶೀಲ ಮತ್ತು ಸುಸ್ಥಿರವಾಗಿರಿಸಲಿ. ನಮ್ಮ ಬೆಂಗಳೂರು ಸದಾ ಹಸಿರಾಗಿರಲಿ, ಉಸಿರಾಗಿರಲಿ ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular