ಗ್ಲೆನ್ ಮ್ಯಾಕ್ಸ್ವೆಲ್ ಮನುಷ್ಯನಲ್ಲ! ಅಫ್ಘಾನಿಸ್ತಾನದ ವಿರುದ್ಧ ದ್ವಿಶತಕ ಸಿಡಿಸಿದ ಮ್ಯಾಕ್ಸ್ ವೆಲ್ ಬಗ್ಗೆ ಭಾರೀ ಮೆಚ್ಚುಗೆ!

ಮುಂಬೈ :  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸವೆಲ್  ಅದ್ಭುತ ಪ್ರದರ್ಶನ ನೀಡಿದ್ದು,ಭರ್ಜರಿ ದ್ವಿಶತಕ ಬಾರಿಸಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ  ಮ್ಯಾಕ್ಸ್ವೆಲ್ ಮತ್ತು ಕಮಿನ್ಸ್ ನಡುವಿನ ಜೊತೆಯಾಟ ಪ್ರಾರಂಭವಾದಾಗ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ದಾಖಲೆಗಳು ಛಿದ್ರಗೊಂಡವು, 128 ಎಸೆತಗಳಲ್ಲಿ 157.03 ಸ್ಟ್ರೈಕ್ ರೇಟ್ನೊಂದಿಗೆ 201 ರನ್ ಗಳಿಸುವ ಮೂಲಕ ಆಸೀಸ್ ಬ್ಯಾಟ್ಸ್ಮನ್ 10 ಸಿಕ್ಸರ್ಗಳು ಮತ್ತು 21 ಬೌಂಡರಿಗಳನ್ನು ಬಾರಿಸಿದರು. 292 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 100 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮ್ಯಾಕ್ಸ್ವೆಲ್ ಅಕ್ಷರಶಃ ಅಫ್ಘಾನಿಸ್ತಾನ ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು ಮುಂಬೈನಲ್ಲಿ ಅಳುವಂತೆ ಮಾಡಿದರು.

ಒಬ್ಬಂಟಿಯಾಗಿ ಸೋಲಿನ ದವಡೆಯಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಪವಾಡದ ರೀತಿಯಲ್ಲಿ ಗೆಲ್ಲುವಂತೆ ಮಾಡಿದ ಗ್ಲೇನ್ ಮ್ಯಾಕ್ಸ್ ವೆಲ್ ಕುರಿತು ಅಭಿಮಾನಿಗಳು ನಾನಾ ರೀತಿಯ ಟ್ವೀಟ್ ಮಾಡಿದ್ದಾರೆ. ಕೆಲವರು ಗ್ಲೇನ್ ಮ್ಯಾಕ್ಸ್ ವೆಲ್ ಮನುಷ್ಯನೇ ಅಲ್ಲ ಅಂದರೆ ಇನ್ನೂ ಕೆಲವರು ಮ್ಯಾಕ್ಸ್ ವೆಲ್ ನನ್ನು ಕೊಂಡಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read