
ವಿಡಿಯೋದಲ್ಲಿ ಇಬ್ಬರು ಹುಡುಗಿಯರು ವೇಗವಾಗಿ ಚಲಿಸುವ ಬೈಕ್ ನಲ್ಲಿ ಪರಸ್ಪರ ಚುಂಬಿಸಸಿದ್ದಾರೆ. ಇಬ್ಬರು ಹುಡುಗಿಯರು ಚಲಿಸುವ ಬೈಕಿನಲ್ಲಿ ಪರಸ್ಪರ ಎದುರಾಗಿ ಕುಳಿತಿರುವುದನ್ನು ಕಾಣಬಹುದು. ಬೈಕ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದು, ಎದುರು ಬದುರು ಕುಳಿತುಕೊಂಡು ಪರಸ್ಪರ ಚುಂಬಿಸಿದ್ದಾರೆ. ಈ ದೃಶ್ಯವನ್ನು ಪಕ್ಕದಲ್ಲಿ ಹೋಗುತ್ತಿದ್ದ ಸವಾರರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.
ವೀಡಿಯೊವನ್ನು ಚಿತ್ರೀಕರಿಸಿದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಬೈಕಿನ ನೋಂದಣಿ ಫಲಕವನ್ನು ನೋಡಿದರೆ, ವೀಡಿಯೊವನ್ನು ತಮಿಳುನಾಡಿನಲ್ಲಿ ಎಲ್ಲೋ ಚಿತ್ರೀಕರಿಸಲಾಗಿದೆ ಎಂದು ಊಹಿಸಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದುವರೆಗೆ 2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸುಮಾರು 80,000 ಲೈಕ್ ಗಳನ್ನು ಗಳಿಸಿದೆ.

