ಚಲಿಸುತ್ತಿದ್ದ ಬೈಕ್ ನಲ್ಲೇ ಲಿಪ್ ಲಾಕ್ ಮಾಡಿದ ಹುಡುಗಿಯರು : ವಿಡಿಯೋ ವೈರಲ್

ಚಲಿಸುತ್ತಿರುವ ಬೈಕ್ ನಲ್ಲಿ ಜೋಡಿಗಳು ಸಾರ್ವಜನಿಕವಾಗಿ ಕಿಸ್, ಲಿಪ್ ಲಾಕ್ ಮಾಡಿದ ಹಲವು ವಿಡಿಯೋ ವೈರಲ್ ಆಗಿದೆ. ಇದೀಗ ಹುಡುಗಿಯರೇ ಚಲಿಸುತ್ತಿರುವ ಬೈಕ್ ನಲ್ಲಿ ಲಿಪ್ ಲಾಕ್ ಮಾಡಿರುವ ವಿಡಿಯೋ ಹರಿದಾಡುತ್ತಿದೆ.

ವಿಡಿಯೋದಲ್ಲಿ ಇಬ್ಬರು ಹುಡುಗಿಯರು ವೇಗವಾಗಿ ಚಲಿಸುವ ಬೈಕ್ ನಲ್ಲಿ ಪರಸ್ಪರ ಚುಂಬಿಸಸಿದ್ದಾರೆ. ಇಬ್ಬರು ಹುಡುಗಿಯರು ಚಲಿಸುವ ಬೈಕಿನಲ್ಲಿ ಪರಸ್ಪರ ಎದುರಾಗಿ ಕುಳಿತಿರುವುದನ್ನು ಕಾಣಬಹುದು. ಬೈಕ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದು, ಎದುರು ಬದುರು ಕುಳಿತುಕೊಂಡು ಪರಸ್ಪರ ಚುಂಬಿಸಿದ್ದಾರೆ. ಈ ದೃಶ್ಯವನ್ನು ಪಕ್ಕದಲ್ಲಿ ಹೋಗುತ್ತಿದ್ದ ಸವಾರರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.

ವೀಡಿಯೊವನ್ನು ಚಿತ್ರೀಕರಿಸಿದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಬೈಕಿನ ನೋಂದಣಿ ಫಲಕವನ್ನು ನೋಡಿದರೆ, ವೀಡಿಯೊವನ್ನು ತಮಿಳುನಾಡಿನಲ್ಲಿ ಎಲ್ಲೋ ಚಿತ್ರೀಕರಿಸಲಾಗಿದೆ ಎಂದು ಊಹಿಸಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದುವರೆಗೆ 2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸುಮಾರು 80,000 ಲೈಕ್ ಗಳನ್ನು ಗಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read