HomeIndiaBIG NEWS: ಪೋಷಕರ ಎದುರಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್

BIG NEWS: ಪೋಷಕರ ಎದುರಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್

ಗ್ವಾಲಿಯರ್: ಪೋಷಕರ ತಲೆಗೆ ಗನ್ ಇಟ್ಟು ಬೆದರಿಸಿದ ಕಾಮುಕರು ಅವರ ಕಣ್ಣೆದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಪೋಷಕರ ಹಣೆಗೆ ಗನ್ ಇಟ್ಟು ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಕಾಮುಕರು. ಗ್ವಾಲಿಯರ್ ನ ಬನ್ವಾರ್ ಪುರ್ ಪ್ರದೇಶದಲ್ಲಿ ಈ ಪೈಶಾಚಿಕ ಕೃತ ನಡೆದಿದೆ. ಪ್ರಕರಣ ಸಂಬಂಧ ಎರಡು ದಿನಗಳ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ಸಂಬ್ಂಧ ಓರ್ವ ಆರೋಪಿಯನ್ನು ಪೊಲಿಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಕುಟುಂಬ ಒಂದು ತಿಂಗಳ ಹಿಂದಷ್ಟೇ ಬನ್ವಾರ್ ಪುರ್ ಪ್ರದೇಶಕ್ಕೆ ಬಂದಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕರಿ ರಿಷೇಶ್ ಮೀನಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular