ಬೆತ್ತಲೆ ವಿಡಿಯೋ ಕಳುಹಿಸಿ ಯುವತಿಯಿಂದ ವೈದ್ಯನಿಗೆ ಬ್ಲ್ಯಾಕ್ ಮೇಲ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾಕ್ಟರ್

ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಗೆ ಯುವತಿ ಬೆತ್ತಲೆ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋರಮಂಗಳ ನಿವಾಸಿಯಾಗಿರುವ 58 ವರ್ಷದ ವೈದ್ಯ ಆಸ್ಪತ್ರೆಯಲ್ಲಿದ್ದಾಗ ಆಗಸ್ಟ್ 22ರಂದು ವೈದ್ಯರ ಮೊಬೈಲ್ ಗೆ ವಾಟ್ಸಪ್ ವಿಡಿಯೋ ಕಾಲ್ ಬಂದಿದೆ. ಪರಿಚಯದವರಿರಬಹುದು ಎಂದು ವೈದ್ಯರು ಕರೆ ಸ್ವೀಕರಿಸಿದ್ದರು. ಆದರೆ ಯುವತಿಯೊಬ್ಬಳು ಬೆತ್ತಲಾಗಿ ಕಾಣಿಸಿಕೊಂಡಿದ್ದಳು. ಗಾಬರಿಯಾದ ವೈದ್ಯ ತಕ್ಷಣ ಕರೆ ಕಟ್ ಮಾಡಿದ್ದರು. ಕೆಲ ನಿಮಿಷಗಳಲ್ಲೇ ಮತ್ತೆ ಯುವತಿ ಕರೆ ಮಾಡಿದ್ದಾಳೆ. ಆದರೆ ವೈದ್ಯರು ಕರೆ ಸ್ವೀಕರಿಸಿಲ್ಲ.

ಬಳಿಕ ಯುವತಿ ವಾಟ್ಸಪ್ ವಿಡಿಯೋ ಕಳುಹಿಸಿದ್ದಾಳೆ. ವಿಡಿಯೋ ನೊಡಿದರೆ ಅದು ದೂರುದಾರ ವೈದ್ಯನ ವಿಡಿಯೋವಾಗಿದೆ. ಇದರಿಂದ ಶಾಕ್ ಆದ ವೈದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರೆಮಾಡಿದ್ದ ಯುವತಿ ವೈದ್ಯನ ವಿಡಿಯೋ ರೆಕಾರ್ಡ್ ಮಾಡಿ 21 ಸೆಕೆಂಡ್ ಗಳ ಬೆತ್ತಲೆ ವಿಡಿಯೋ ಸಿದ್ಧಪಡಿಸಿದ್ದಾಳೆ. ಅಲ್ಲದೇ ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾಳೆ. ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ಯುವತಿ ಹಾಗೂ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read