ಪ್ರೇರಣೆ, ಪ್ರೋತ್ಸಾಹ ಮತ್ತು ಸಕಾರಾತ್ಮಕ ಮನೋಭಾವದ ಬಗ್ಗೆ ಸಾಕಷ್ಟು ಉದಾಹರಣಗಳು ಕಾಣಸಿಗುತ್ತವೆ. ಗೆಲುವು ಸಾಧಿಸಬೇಕು ಎನ್ನುವ ಛಲವಿದ್ದರೆ ಯಾವ ಅಡೆತಡೆಗಳಿದ್ದರೂ ಅದನ್ನು ಜಯಿಸಬಲ್ಲರು ಎಂಬ ಮಾತಿದ್ದು, ಅದಕ್ಕೆ ಹಲವಾರು ನಿದರ್ಶನಗಳಿವೆ.
ಅಂಥದ್ದೇ ಒಂದು ಉದಾಹರಣೆಯ ವಿಡಿಯೋ ವೈರಲ್ ಆಗಿದೆ. ನಮ್ಮಿಂದ ಸಾಧ್ಯವಿಲ್ಲ ಎನ್ನುವ ಯಾವ ಕೆಲಸವೂ ಇಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ವಿಡಿಯೋದಲ್ಲಿ ಒಂದು ಕಾಲನ್ನು ಮಾತ್ರ ಹೊಂದಿರುವ ಹುಡುಗಿಯೊಬ್ಬಳನ್ನು ನೋಡಬಹುದು.
ಈಕೆ ತನ್ನ ಸಾಮರ್ಥ್ಯವನ್ನು ಮೀರಿ ಭಾರವನ್ನು ಎತ್ತಲು ಪ್ರಯತ್ನಿಸಿದ್ದಾಳೆ. ಕೊನೆಗೆ ಅದರಲ್ಲಿ ಜಯ ಸಾಧಿಸಿದ್ದಾಳೆ. ಈ ವಿಡಿಯೋ ನೋಡುಗರನ್ನು ಉಸಿರು ನಿಲ್ಲಿಸುವಂತೆ ಮಾಡುತ್ತದೆ. ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರಿಗೆ ಇದು ಪಾಠವಾಗಿದೆ.
not letting life keep her down pic.twitter.com/xNXBxizC8G
— Top Talents (@TopTaIents) February 16, 2023

