HomeKarnatakaBIG NEWS: ಜಿಮ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ

BIG NEWS: ಜಿಮ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ

ಬೆಂಗಳೂರು: ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಲು ಪೋಷಕರು ಒಪ್ಪಿಲ್ಲ ಎಂದು ಯುವತಿಯೊಬ್ಬಳು ಜಿಮ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರಾವಣಿ (22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ದಾವಣಗೆರೆ ಮೂಲದ ಶ್ರಾವಣಿ ಬಾಗಲಗುಂಟೆ ಬಳಿ ಗೋಲ್ಡ್ ಜಿಮ್ ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಶ್ರಾವಣಿ ಬೇರೊಬ್ಬ ಯುವಕನನ್ನು ಪ್ರೀತಿಸಿದ್ದಳು. ಈ ನಡುವೆ ಯುವತಿ ಮನೆಯಲ್ಲಿಯೂ ಮದುವೆಗೆ ಹುಡುಗನನ್ನು ನೋಡಿದ್ದರು. ಪೋಷಕರು ನೋಡಿದ್ದ ಹುಡುಗನನ್ನು ಮದುವೆಯಾಗಲು ಶ್ರಾವಣಿ ನಿರಾಕರಿಸಿದ್ದಾಳೆ. ಮದುವೆಗೆ ಒಪ್ಪದೇ ಎಂದಿನಂತೆ ಕೆಲಸಕ್ಕೆ ಜಿಮ್ ಗೆ ಬಂದಿದ್ದಾಳೆ.

ಜಿಮ್ ಗೆ ಬಂದ ಯುವತಿ ವಿಷ ಸೇವಿಸಿ ಬಳಿಕ ತಾನು ಪ್ರ‍ೀತಿಸಿದ ಯುವಕನಿಗೆ ಮೆಸೇಜ್ ಮಾಡಿದ್ದಾಳೆ. ಜಿಮ್ ನಲ್ಲಿ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶ್ರಾವಣಿ ಸಾವನ್ನಪ್ಪಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular