HomeKarnatakaಶಿವಮೊಗ್ಗದಿಂದ ರೈಲು ಹತ್ತಿದ್ದ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ

ಶಿವಮೊಗ್ಗದಿಂದ ರೈಲು ಹತ್ತಿದ್ದ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ

ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಲೆಂದು ರೈಲು ಹತ್ತಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

19 ವರ್ಷದ ಐಶ್ವರ್ಯ ನಾಪತ್ತೆಯಾಗಿರುವ ಯುವತಿ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ದೇವಿಕೊಪ್ಪ ರಸ್ತೆಯ ಶಾಂತಿನಗರ ನಿವಾಸಿಯಾಗಿರುವ ಐಶ್ವರ್ಯ, ಶಿವಮೊಗ್ಗಕ್ಕೆ ಆಗಮಿಸಿದ್ದರು.

ಮೇ 15ರಂದು ಶಿವಮೊಗ್ಗದಿಂದ ಬೆಂಗಳೂರಿನ ಯಶವಂತಪುರಕ್ಕೆ ಹೋಗುವ ಎಕ್ಸ್ ಪ್ರೆಸ್ ರೈಲು ಹತ್ತಿದ್ದ ಯುವತಿ ನಾಪತ್ತೆಯಾಗಿದ್ದಾರೆ. ಕಳೆದ 5 ದಿನಗಳಿಂದ ಯುವತಿಯ ಸುಳಿವಿಲ್ಲ. ಬೆಂಗಳೂರಿನಲ್ಲಿ ಆಕೆ ಕೆಲಸ ಮಾಡುವ ಕಚೇರಿಗೂ ಹೋಗಿಲ್ಲ. ಮನೆಗೂ ತೆರಳಿಲ್ಲ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿ ಪೇಂಟ್ ಗ್ರೀನ್ ಕಲರ್ ಟಾಪ್, ಕ್ರೀಮ್ ಬಣ್ಣದ ಪ್ಯಾಂಟ್, ಕ್ರೀಮ್ ಬಣ್ಣದ ದುಪ್ಪಟ್ಟಾ ಧರಿಸಿದ್ದು ಕನ್ನಡದಲ್ಲಿ ಮಾತನಾಡಬಲ್ಲರು.

ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-222974/ 9480802124ಕ್ಕೆ ಸಂಪರ್ಕಿಸಿ ಎಂದು ರೈಲ್ವೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular