ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದಿದೆ.
ಇನ್ ಸ್ಟಾ ಗ್ರಾಂನಲ್ಲಿ ಪರಿಚಯಿಸಿಕೊಂಡಿದ್ದ ಇಬ್ಬರು ಆರೋಪಿಗಳು ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭವತಿಯಾಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.
ಉದಯ್ ಕರಿಯಣ್ಣನವರ್, ಕಿಶನ್ ವಡ್ಡರ್, ಆಕಾಶ್ ಮಂತಗಿ, ಚಂದ್ರು ಗೊಲ್ಲರ ಎಂಬುವವರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಳೆದ ಮಾರ್ಚ್ ನಲ್ಲಿ ಉದಯ್ ಇನ್ ಸ್ಟಾಗ್ರಾಮ್ ನಲ್ಲಿ ಬಾಲಕಿಗೆ ಪರಿಚಯವಾಗಿದ್ದಾನೆ. ಅದೇ ತಿಂಗಳ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಏಪ್ರಿಲ್ ನಲ್ಲಿ ಕಿಶನ್ ವಡ್ಡರ್, ಆಕಾಶ್ ಮಂತಗಿ, ಚಂದ್ರು ಗೊಲ್ಲರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಸಂತ್ರಸ್ತೆ ಗರ್ಭವತಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ ಬಂದಿದೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
