HomeKarnatakaಮದುವೆಗೆ ಹುಡುಗಿ ಕೊಡುವುದಾಗಿ ಹೇಳಿ ಹಣ ಪಡೆದು ಯುವಕನಿಗೆ ಯುವತಿ ಕುಟುಂಬದಿಂದಲೇ ವಂಚನೆ

ಮದುವೆಗೆ ಹುಡುಗಿ ಕೊಡುವುದಾಗಿ ಹೇಳಿ ಹಣ ಪಡೆದು ಯುವಕನಿಗೆ ಯುವತಿ ಕುಟುಂಬದಿಂದಲೇ ವಂಚನೆ

ಮೈಸೂರು: ಮಗನನ್ನು ಮದುವೆ ಮಾಡಿಸುವುದಾಗಿ ಹೇಳಿ ಯುವಕನಿಂದ ಹಣಪಡೆದು ಯುವತಿಯ ಕುಟುಂಬದವರೇ ವಂಚಿಸಿರುವ ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಗ್ರಾಮದ ವೆಂಕಟೇಶ್ ಹಾಗೂ ಲಕ್ಷ್ಮಿ ದಂಪತಿ ತಮ್ಮ ಮಗಳು ಸಿಂಚನಾಳನ್ನು ಮದುವೆ ಮಾಡಿಸುವುದಾಗಿ ಹೇಳಿ ಯುವಕನಿಂದ 25 ಲಕ್ಷ ರೂಪಾಯಿ ಹಣ ಪಡೆದಿದ್ದಾರಂತೆ ಆದರೆ ಕೊಟ್ಟ ಹಣವನ್ನೂ ವಾಪಾಸ್ ಕೊಡದೆ ಮದುವೆಗೆ ಹೆಣ್ಣು ಕೊಡದೇ ವಂಚಿಸಿದ್ದಾರೆ ಎಂದು ಯುವಕನ ಕುಟುಂಬ ಆರೋಪಿಸಿದೆ.

ತಮ್ಮ ಮಗಳು ಸಿಂಚನಾಳನ್ನು ಅಶೋಕ್ ಎಂಬ ಯುವಕನಿಗೆ ಮದುವೆ ಮಾಡಿ ಕೊಡುವುದಾಗಿ ಯುವತಿ ಪೋಷಕರು ಹೇಳಿದ್ದರಂತೆ. ಮದುವೆ ಮಾತುಕತೆಯೂ ನಡೆದಿದೆ. ಬಳಿಕ ಸಿಂಚನಾಳ ಕುಟುಂಬ ತಮಗೆ ವ್ಯವಸಾಯದಲ್ಲಿ ತುಂಬಾ ಲಾಸ್ ಆಗಿದೆ. ಹಣದ ಸಹಾಯ ಮಾಡುವಂತೆ ಕೇಳಿದ್ದರು. ಸಾಲದ ರೂಪದಲ್ಲಿ 25 ಲಕ್ಷ ಹಣವನ್ನು ಯುವಕನ ಕುಟುಂಬದವರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈಗ ಮಗಳನ್ನು ಮದುವೆ ಮಾಡಲು ನಿರಾಕರಿಸುತ್ತಿದ್ದು, ಕೊಟ್ಟ 25 ಲಕ್ಷ ಹಣವನ್ನೂ ವಾಪಾಸ್ ಕೊಡುತ್ತಿಲ್ಲ. ಹಾಗಾಗಿ ಯುವತಿಯ ತಂದೆ ವೆಂಕಟೇಶ್, ತಾಯಿ ಲಕ್ಷ್ಮೀ ಹಾಗೂ ಯುವತಿ ಸಿಂಚನಾ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಯುವಕ ಅಶೋಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular