HomeLatest NewsBIG NEWS: ಜೋಕಾಲಿ ಆಡುವಾಗ ದುರಂತ: ದುಪ್ಪಟ್ಟಾ ಸಿಲುಕಿ ಬಾಲಕಿ ದುರಂತ ಸಾವು

BIG NEWS: ಜೋಕಾಲಿ ಆಡುವಾಗ ದುರಂತ: ದುಪ್ಪಟ್ಟಾ ಸಿಲುಕಿ ಬಾಲಕಿ ದುರಂತ ಸಾವು

ಕಾರವಾರ: ಜೋಕಾಲಿ ಆಡುವಾಗ ದುಪ್ಪಟ್ಟಾ ಕತ್ತಿಗೆ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.

ಪ್ರಣಿತಾ ನಾಯ್ಕ್ (12) ಮೃತ ಬಾಲಕಿ. ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಜೋಕಾಲಿ ಆಡುತ್ತಿದ್ದಳು. ಈ ವೇಳೆ ಚೂಡಿದಾರ್ ವೇಲ್ ಜೋಕಾಲಿಗೆ ಸಿಲುಕಿ ಕುತ್ತಿಗೆಗೆ ಸುತ್ತಿಕೊಂಡಿದೆ. ಬಿಡಿಸಿಕೊಳ್ಳಲಾಗದೇ ಕತ್ತು ಬಿಗಿದು ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಳು. ಇದನ್ನು ಗಮನಿಸಿದ ಪೋಷಕರು ಬಾಲಕಿಯನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕಿ ಉಸಿರು ಚೆಲ್ಲಿದ್ದಾಳೆ.

ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular