HomeLatest NewsSHOCKING: ಕಸದ ರಾಶಿಯಲ್ಲಿ ಯುವತಿಯ ಶವ ಪತ್ತೆ

SHOCKING: ಕಸದ ರಾಶಿಯಲ್ಲಿ ಯುವತಿಯ ಶವ ಪತ್ತೆ

ನೋಯ್ಡಾ: ಕಸದ ರಾಶಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಕಸದ ರಾಶಿಯಲ್ಲಿದ್ದ ಮೂಟೆಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

ನೊಯ್ಡಾದಲ್ಲಿ ಈ ಘಟನೆ ನಡೆದಿದೆ. ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯುವತಿಯನ್ನು ಕೊಲೆಗೈದು ಕೈ-ಕಾಲು ಕಟ್ಟಿ ಚೀಲದಲ್ಲಿ ತುಂಬಿ ಕಸದ ರಾಶಿಗೆ ಎಸೆಯಲಾಗಿದೆ. ಯುವತಿಯ ಮುಖದಲ್ಲಿ ಸುಟ್ಟ ಗುರುತುಗಳು ಪತ್ತೆಯಾಗಿವೆ.

ಯುವತಿಯ ಸಾವಿಗೆ ನಿಖರ ಕಾರಣ ತನಿಖೆ ಬಳಿಕವೇ ತಿಳಿಯಬೇಕಿದೆ. ಸುಮಾರು ಪೊಲೀಸರ ಪ್ರಕಾರ ಮೃತ ಯುವತಿ ಸುಮಾರು 22 ರಿಂದ 25 ವರ್ಷ ವಯಸ್ಸಿನವರಾಗಿರಬಹುದು ಎಂದು ಹೇಳಲಾಗುತ್ತಿದೆ. ಯುವತಿಯ ಗುರುತು ಪತ್ತೆಗೂ ತನಿಖೆ ನಡೆಸಲಾಗುತ್ತಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯುವತುಯನ್ನು ಬೇರೆಡೆ ಕೊಲೆಗೈದು ಬಳಿಕ ಶವವನ್ನು ಮೂಟೆಕಟ್ಟಿ ಇಲ್ಲಿಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular