ಹಲವು ರೋಗಗಳಿಗೆ ರಾಮಬಾಣ ʼಶುಂಠಿʼ

ಶುಂಠಿ ಆರೋಗ್ಯಕರ ಸಾಂಬಾರ ದ್ರವ್ಯಗಳಲ್ಲೊಂದು. ಇದರಲ್ಲಿ ಪೋಷಕಾಂಶಗಳು ಕೂಡ ಹೇರಳವಾಗಿವೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಶುಂಠಿ ಸಹಕಾರಿ. ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿರುವ ಶುಂಠಿಯ 5 ಪ್ರಯೋಜನಗಳು ಯಾವುದು ಅನ್ನೋದನ್ನು ನೋಡೋಣ.

ಶುಂಠಿಯಲ್ಲಿ ಜಿಂಜರೊಲ್ ಇದೆ. ಇದು ಶಕ್ತಿಯುತ ಔಷಧೀಯ ಗುಣಗಳನ್ನು ಹೊಂದಿರುವ ಒಂದು ಪದಾರ್ಥ. ಶುಂಠಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ. ಲಾಲಾರಸ ಮತ್ತು ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಗ್ಯಾಸ್ಟ್ರಿಕ್ ನಿಂದ ಉಂಟಾಗುವ ಹೊಟ್ಟೆ ಉಬ್ಬರಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಆಹಾರ ಮತ್ತು ದ್ರವ್ಯಗಳ ಚಲನೆಯನ್ನು ಕಡಿಮೆ ಮಾಡುತ್ತದೆ.

ವಾಕರಿಕೆ ಅಥವಾ ವಾಂತಿಯನ್ನು ನಿಯಂತ್ರಿಸಲು ಶುಂಠಿ ಸಹಾಯ ಮಾಡುತ್ತದೆ. ಗರ್ಭಿಣಿಯರಿಗೆ ಬೆಳಗಿನ ಸಮಯದಲ್ಲಿ ವಾಕರಿಕೆಯಿಂದ ಸುಸ್ತು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಶುಂಠಿ ಸೇವನೆಯಿಂದ ಉಪಯುಕ್ತ ಲಾಭಗಳಿವೆ.

ಶೀತ, ನೆಗಡಿ ಅಥವಾ ಕಫದ ಸಮಸ್ಯೆ ಇದ್ದಾಗ ಶುಂಠಿ ಕಷಾಯ ಮಾಡಿ ಕುಡಿದರೆ ರಿಲೀಫ್ ಸಿಗುತ್ತದೆ. ಶೀತ ಹವಾಮಾನದಲ್ಲಿ ಶುಂಠಿ ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಶುಂಠಿ ಸ್ವೇದಕಾರಿ, ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ಬೆವರನ್ನು ಉತ್ತೇಜಿಸುತ್ತದೆ.

ಪ್ರತಿದಿನ ಶುಂಠಿ ಸೇವಿಸುವುದರಿಂದ ಮಾಂಸಖಂಡದ ನೋವು ಶೇ.25 ರಷ್ಟು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಋತುಸ್ರಾವದ ಸಮಯದಲ್ಲಿ ಕೂಡ ಶುಂಠಿ ಸೇವನೆಯಿಂದ ನೋವು ಕಡಿಮೆಯಾಗುತ್ತದೆ.

ಶುಂಠಿ ಉರಿಯೂತ ಕಡಿಮೆ ಮಾಡಬಲ್ಲದು, ಉರಿಯೂತದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ. ಕ್ಯಾನ್ಸರ್ ಪ್ರಿವೆನ್ಷನ್ ರಿಸರ್ಚ್ ಜರ್ನಲ್ ನಡೆಸಿದ ಅಧ್ಯಯನದಲ್ಲಿ ಇದು ದೃಢಪಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read