HomeKarnatakaBIG NEWS: ಬೆಂಗಳೂರಿನಲ್ಲಿ ಜಿಬಿಎಯಿಂದ ಡ್ರೋನ್ ಸರ್ವೆ: ಹೊಸ ಹೆಚ್ಚುವರಿ ಆಸ್ತಿ ತೆರಿಗೆ: ಬಿಜೆಪಿ ಆಕ್ರೋಶ

BIG NEWS: ಬೆಂಗಳೂರಿನಲ್ಲಿ ಜಿಬಿಎಯಿಂದ ಡ್ರೋನ್ ಸರ್ವೆ: ಹೊಸ ಹೆಚ್ಚುವರಿ ಆಸ್ತಿ ತೆರಿಗೆ: ಬಿಜೆಪಿ ಆಕ್ರೋಶ

ಬೆಂಗಳೂರು: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಡ್ರೋನ್ ಸರ್ವೆ ಬಳಿಕ ಹೊಸ ಹೆಚ್ಚುವರಿ ಆಸ್ತಿ ತೆರಿಗೆ ವಿಧಿಸಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿದ್ವನಿಸಿದೆ. ಜಿಬಿಎ ಈ ಕ್ರಮದ ಬಗ್ಗೆ ವಿಪಕ್ಷ ಬಿಜೆಪಿ ಭಾರಿ ಆಕ್ಶೇಪ ವ್ಯಕ್ತಪಡಿಸಿದೆ.

ಬೆಂಗಳೂರಿನ ನಾಗರಿಕರ ಮೇಲೆ ಜಿಬಿಎ ಡ್ರೋನ್ ದಾಳಿ ನಡೆಸುತ್ತಿದೆ. ಡ್ರೋನ್ ಮೂಲಕ ಸರ್ವೆ ಮಾಡಿ ಹೊಸ ಆಸ್ತಿ ತೆರಿಗೆ ವಿಧಿಸುತ್ತಿದೆ. ಬಾಲ್ಕನಿ, ಕಿಟಕಿ, ಟ್ಯಾಂಕ್ ಸೇರಿದಂತೆ ಮನೆಗಳ ಪೂರಕ ಕಟ್ಟಡಗಳಿಗೂ ತೆರಿಗೆ ವಿಧಿಸಿ ನೋಟಿಸ್ ನೀಡಲಾಗಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಈ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್, ಸಮಸ್ಯೆಯಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಾಗಿ ಹೇಳಿದ್ದಾರೆ.

ತೆರಿಗೆ ವಸೂಲಿ ವಿಚಾರದಲ್ಲಿನ ಜಿಬಿಎ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಿಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿ ಮನೆಯ ಪೂರಕ ಕಟ್ಟಡಕ್ಕೂ ತೆರಿಗೆ ವಿಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದುವರೆಗೂ ಅಂದಾಜು 46 ಸಾವಿರ ಮನೆ ಮಾಲಿಕರಿಂದ ಟ್ಯಾಕ್ಸ್​​ ಸಂಗ್ರಹಕ್ಕೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷದವರೆಗೂ ಹೆಚ್ಚವರಿ ತೆರಿಗೆ ವಸೂಲಿಗೆ ಮೆಸೇಜ್ ಮೂಲಕ ನೋಟಿಸ್ ನೀಡಿದೆ.

ಮೆಸೇಜ್ ಓಪನ್ ಮಾಡಿದ್ರೆ ನೋಟಿಸ್ ಸ್ವೀಕರಿಸಲಾಗಿದೆ ಎಂದೇ ಭಾವಿಸಿ ಕ್ರಮಕ್ಕೆ ಮುಂದಾಗಲಿರುವ ಜಿಬಿಎ ಹೆಚ್ಚುವರಿ ತೆರಿಗೆ ಪ್ರಶ್ನೆ ಮಾಡಿದವರ ಮನೆಯನ್ನೇ ಹರಾಜಿಗೆ ಮುಂದಾಗಿದೆ. 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದ್ದು, ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಲಾಗಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನಿಸಿದ್ದಾರೆ.

ಡ್ರೋನ್​​ ಸರ್ವೆ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಬಾಕಿ ಹೆಚ್ಚುವರಿ ತೆರಿಗೆ, ದಂಡ ವಿಧಿಸಲಾಗುತ್ತಿದೆ. ಒಂದು ಮನೆಗೆ 7-8 ಲಕ್ಷ, 30 ಲಕ್ಷದವರೆಗೆ ತೆರಿಗೆ, ದಂಡ ಹಾಕ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ವಿಷಯ ಪ್ರಸ್ತಾಪಿಸಿದ್ದಾರೆ. ರಾಮಮೂರ್ತಿ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕರ ಸುರೇಶ್ ಕುಮಾರ್,​​ ಇದು ಆಸ್ತಿ ತೆರಿಗೆ ಭಯೋತ್ಪಾದನೆ. ಇದನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಡ್ರೋನ್​ ಸರ್ವೇ ನಡೆಸಿ ಯಾವುದೇ ನೋಟಿಸ್ ಕೊಡ್ತಿಲ್ಲ. ಆದ್ರೆ ಡ್ರೋನ್​ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಮೊದಲು ಸೆಲ್ಫ್ ಅಸೆಸ್‌ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್​ಮೆಂಟ್ ಸ್ಕೀಂ ಕೂಡಾ ಕೊಡುತ್ತಿದ್ದೇವೆ. ಈ ಬಗ್ಗೆ ಯಾರಿಗಾದ್ರೂ ಸಮಸ್ಯೆ ಇದ್ರೆ ಅರ್ಜಿ ಕೊಡಲಿ. ಸಮಸ್ಯೆ ಇದ್ದವರಿಗೆ ಸರಿಪಡಿಸ್ತೇವೆ ಎಂದು ಹೇಳುವ ಮೂಲಕ ಸಮಜಾಯಿಷಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular