HomeKarnataka2026ರಲ್ಲಿ ಬೆಂಗಳೂರಲ್ಲಿ ಪೂರ್ಣಗೊಳ್ಳುವ ಫ್ಲೈ ಓವರ್, ಅಂಡರ್‌ಪಾಸ್‌ಗಳು

2026ರಲ್ಲಿ ಬೆಂಗಳೂರಲ್ಲಿ ಪೂರ್ಣಗೊಳ್ಳುವ ಫ್ಲೈ ಓವರ್, ಅಂಡರ್‌ಪಾಸ್‌ಗಳು

ಬೆಂಗಳೂರು ನಗರದಲ್ಲಿ ಯಾವ ರಸ್ತೆ ನೋಡಿದರೂ ಕಾಮಗಾರಿಗಾಗಿ ಅಗೆದು ಹಾಕಲಾಗಿದೆ. ವಾಹನ ಸವಾರರು ಸರ್ಕಾರ, ಜಿಬಿಎ ಅಧಿಕಾರಿಗಳಿಗೆ ಬೈದುಕೊಂಡು ಮುಂದೆ ಸಾಗುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ಗುಂಡಿಗಳು, ಈಗ ಕಾಮಗಾರಿಗಾಗಿ ಅಗೆದ ರಸ್ತೆಗಳು ವಾಹನ ಸವಾರರ ತಾಳ್ಮೆ ಪರೀಕ್ಷೆ ಮಾಡುತ್ತಿವೆ.

ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ. 2026ರಲ್ಲಿ 10 ಫ್ಲೈ ಓವರ್, ಅಂಡರ್‌ಪಾಸ್‌ಗಳ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಂಡಿದೆ.

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿಯೂ ಬೆಂಗಳೂರು ನಗರದಲ್ಲಿ 10 ಪ್ರಮುಖ ಯೋಜನೆಗಳನ್ನು ಈ ವರ್ಷ ಪೂರ್ಣಗೊಳಿಸಲಾಗುತ್ತದೆ ಎಂದು ಸರ್ಕಾರ ಉತ್ತರವನ್ನು ನೀಡಿದೆ. ಜಿಬಿಎ ಚುನಾವಣೆ ಸಹ ಎದುರಾಗಿರುವ ಕಾರಣ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗರದ ಹಲವು ಯೋಜನೆಗಳು ಪ್ರಾರಂಭವಾಗಿದ್ದು 2020ರಲ್ಲಿ. ಇವುಗಳ ಕಾಮಗಾರಿಯನ್ನು ಮುಗಿಸಲು ಈಗಾಗಲೇ ಹಲವು ಗಡುವುಗಳು ಮೀರಿ ಹೋಗಿದೆ. ಆದರೆ ಈ ವರ್ಷ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ. ನಿಜವಾಗಿಯೂ ಇವು ಪೂರ್ಣಗೊಳ್ಳುತ್ತದೆಯೇ? ಎಂಬುದು ಜನರ ಪ್ರಶ್ನೆಯಾಗಿದೆ.

ಯೋಜನೆಗಳ ವಿವರ: 2020ರ ನವೆಂಬರ್‌ನಲ್ಲಿ ಅಂದಿನ ಬಿಬಿಎಂಪಿ ಎರಡು ಗ್ರೇಡ್ ಸಪರೇಟರ್ ಕಾಮಗಾರಿ ಪೂರ್ಣಗೊಳಿಸಿತ್ತು. ಉಳ್ಳಾಲ ಮುಖ್ಯರಸ್ತೆಯಲ್ಲಿ ಆರ್.ಆರ್.ನಗರ-ಕೆಂಗೇರಿ ಔಟರ್ ರಿಂಗ್ ರೋಡ್ ಮತ್ತು ಹೆಚ್‌ಎಂಟಿ ರೋಡ್ ಪೈಪ್‌ಲೈನ್ ಜಂಕ್ಷನ್ ಕಾಮಗಾರಿಗಳು ಇನ್ನೂ ಸಹ ಅಪೂರ್ಣವಾಗಿವೆ.

2019, 2022ರಲ್ಲಿ ಘೋಷಣೆ ಮಾಡಿದ ಎರಡು ಯೋಜನೆಗಳು ಇನ್ನು ಸಹ ಬಾಕಿ ಇದೆ. ಜಾಲಹಳ್ಳಿ ಸರ್ಕಲ್‌ನಲ್ಲಿ ಘೋಷಣೆ ಮಾಡಿದ ಯೋಜನೆ ಭೂ ಸ್ವಾಧೀನದ ಕಾರಣ ಇನ್ನೂ ಪ್ರಾರಂಭವಾಗಿಲ್ಲ. ಕೆಂಗೇರಿ ಔಟರ್ ರಿಂಗ್ ರೋಡ್‌ನಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಕೈಗೊಂಡ ಕಾಮಗಾರಿ 2022ರಿಂದ ಅರ್ಧಕ್ಕೆ ನಿಂತಿದೆ.

ಜಿಬಿಎ ಅಧಿಕಾರಿಗಳ ಪ್ರಕಾರ ಭೂ ಸ್ವಾಧೀನದ ಕಾರಣ ಯೋಜನೆಗಳು ವಿಳಂಬವಾಗುತ್ತಿವೆ. 12 ಯೋಜನೆಗಳ ಪೈಕಿ 4 ಯೊಜನೆ ಭೂ ಸ್ವಾಧೀನದ ವಿವಾದದ ಕಾರಣ ಅರ್ಧಕ್ಕೆ ನಿಂತಿದೆ ಅಥವ ಪೂರ್ಣಗೊಂಡಿಲ್ಲ.

ಭೂ ಸ್ವಾಧೀನದ ವಿವಾದ ಬಗೆಹರಿಯದೇ, ವಿವಿಧ ಕಡೆಯಿಂದ ಅನುಮತಿ ದೊರೆಯದೇ ಕಾಮಗಾರಿ ಪ್ರಾರಂಭಿಸಿದ್ದು ಏಕೆ? ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಆದ್ದರಿಂದ ಈ ಕಾಮಗಾರಿಗಳು 2026ರಲ್ಲಿ ಪೂರ್ಣಗೊಳ್ಳಲಿವೆ ಎಂಬ ಅಧಿಕಾರಿಗಳ ಮಾತನ್ನು ಜನರು ನಂಬುವ ಸ್ಥಿತಿಯಲ್ಲಿಯೂ ಇಲ್ಲ.

ಈಜಿಪುರ ಫ್ಲೈ ಓವರ್ ಕೆಲಸ ನೋಡಿ. ಅಧಿಕಾರಿಗಳು ಪ್ರತಿ ತಿಂಗಳು ಹೊಸ ಹೊಸ ಗಡುವು ನೀಡುತ್ತಿದ್ದಾರೆ. ಆದರೆ ಕೆಲಸ ಮಾತ್ರ ಹಾಗೆಯೇ ಇದೆ. ಯೋಜನೆ ಪೂರ್ಣಗೊಳಿಸುವ ಯಾವ ಇಚ್ಛಾಶಕ್ತಿಯೂ ಅಧಿಕಾರಿಗಳ ಬಳಿ ಇಲ್ಲ ಎಂದು ಜನರು ದೂರಿದ್ದಾರೆ.

ಹಲವು ಯೋಜನೆಗಳು ಬಾಕಿ ಇರುವುವಾಗಲೂ ಜಿಬಿಎ ಹೊಸ ಹೊಸ ವೈಟ್ ಟಾಪಿಂಗ್ ಕೆಲಸ ಪ್ರಾರಂಭಿಸಿದೆ. ಜಲಮಂಡಳಿ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಂಡು ನಗರದ ರಸ್ತೆಗಳನ್ನು ಅಗೆದು ಹಾಕಿದೆ. ವಾಹನ ಸವಾರರಿಗೆ ಸಂಕಷ್ಟ ತಂದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಈಜಿಪುರ ಫ್ಲೈ ಓವರ್: 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿಯು ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ದಿನಾಂಕ 20-11-2023 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿದೆ. ಟೆಂಡರ್‌ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಇನ್ನೂ ಸಹ ಪೂರ್ಣಗೊಂಡಿಲ್ಲ.

ಡಬಲ್ ಡೆಕ್ಕರ್ ಫ್ಲೈ ಓವರ್: ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವಿನ ಡಬಲ್ ಡೆಕ್ಕರ್ ಒಂದು ಬದಿಯ ಕಾಮಗಾರಿ ಇನ್ನೂ ಸಹ ಪೂರ್ಣಗೊಂಡಿಲ್ಲ. ಒಂದು ಕಡೆ ವಾಹನ ಸಂಚಾರವನ್ನು ನಡೆಸುತ್ತಿದ್ದು, ಮತ್ತೊಂದು ಬದಿ ಈ ವರ್ಷದ ಮಾರ್ಚ್‌ನಲ್ಲಿ ವಾಹನ ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular