HomeLatest Newsಗವಿಮಠದ ದಾಸೋಹಕ್ಕೆ 18 ಲಕ್ಷ ರೊಟ್ಟಿ, 6 ಲಕ್ಷ ಮಿರ್ಚಿ: ದಕ್ಷಿಣದ ಕುಂಭಮೇಳದ ಬೃಹತ್ ಪ್ರಸಾದದ...

ಗವಿಮಠದ ದಾಸೋಹಕ್ಕೆ 18 ಲಕ್ಷ ರೊಟ್ಟಿ, 6 ಲಕ್ಷ ಮಿರ್ಚಿ: ದಕ್ಷಿಣದ ಕುಂಭಮೇಳದ ಬೃಹತ್ ಪ್ರಸಾದದ ಪಟ್ಟಿ ಇಲ್ಲಿದೆ ನೋಡಿ

ಕೊಪ್ಪಳ;ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು 2026ರಲ್ಲಿ ಅತ್ಯಂತ ವೈಭವದಿಂದ ಆರಂಭಗೊಂಡಿದೆ.ನಿನ್ನೆ ನಡೆದ ರಥೋತ್ಸವದಲ್ಲಿ ಸುಮಾರು 8 ರಿಂದ 10 ಲಕ್ಷ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಮಹಾದಾಸೋಹ’ಕ್ಕಾಗಿ ಭಕ್ತರು ಅರ್ಪಿಸಿರುವ ಮತ್ತು ಸಿದ್ಧಪಡಿಸಲಾದ ಪ್ರಸಾದ ಪದಾರ್ಥಗಳ ಬೃಹತ್ ಪಟ್ಟಿ ಬಿಡುಗಡೆಯಾಗಿದೆ.

ಲಕ್ಷಾಂತರ ಭಕ್ತರು ಭಾಗವಹಿಸುವ ಈ ಜಾತ್ರೆಯಲ್ಲಿ ಯಾರಿಗೂ ಪ್ರಸಾದದ ಕೊರತೆಯಾಗದಂತೆ ಮಠದ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ. ಈ ಬಾರಿಯ ದಾಸೋಹದ ಪದಾರ್ಥಗಳ ವಿವರ ನೋಡುವುದಾದರೆ, ಸಂಖ್ಯೆಗಳು ಬೆರಗುಗೊಳಿಸುವಂತಿವೆ.

ಮಹಾದಾಸೋಹದ ಪದಾರ್ಥಗಳ ವಿವರ:


ಜಾತ್ರೆಯ ದಾಸೋಹಕ್ಕಾಗಿ ಈ ಕೆಳಗಿನ ಪದಾರ್ಥಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೊಟ್ಟಿ: ಒಟ್ಟು 18,38,000 ರೊಟ್ಟಿಗಳು ಸಿದ್ಧವಾಗಿವೆ.

ಮೈಸೂರ್ ಪಾಕ್: ಸಿಹಿ ಪ್ರಸಾದಕ್ಕಾಗಿ 175 ಕ್ವಿಂಟಲ್ ಮೈಸೂರ್ ಪಾಕ್ ಬಳಸಲಾಗುತ್ತಿದೆ.

ಮಾದಲಿ: ಬರೋಬ್ಬರಿ 467 ಕ್ವಿಂಟಲ್ ಮಾದಲಿಯನ್ನು ಸಿದ್ಧಪಡಿಸಲಾಗಿದೆ.

ಶೇಂಗಾ ಹೋಳಿಗೆ: 62 ಕ್ವಿಂಟಲ್ ಶೇಂಗಾ ಹೋಳಿಗೆಯನ್ನು ಭಕ್ತರಿಗಾಗಿ ತಯಾರಿಸಲಾಗಿದೆ.

ರವೆ ಉಂಡೆ: 47 ಕ್ವಿಂಟಲ್ ರವ ಉಂಡೆಗಳನ್ನು ಸಂಗ್ರಹಿಸಲಾಗಿದೆ.

ಬೂಂದಿ : 25 ಕ್ವಿಂಟಲ್ ಬೂಂದಿ ಪ್ರಸಾದಕ್ಕೆ ಲಭ್ಯವಿದೆ.

ಮಿರ್ಚಿ: ಜಾತ್ರೆ ಎಂದರೆ ಅಲ್ಲಿ ಮಿರ್ಚಿ ಇರಲೇಬೇಕು. ಭಕ್ತರ ಅಚ್ಚುಮೆಚ್ಚಿನ ಮಿರ್ಚಿ ತಯಾರಿಸಲು ಮಠವು ಭರ್ಜರಿ ತಯಾರಿ ನಡೆಸಿದೆ. ಸುಮಾರು 12 ಬ್ಯಾರಲ್ ಎಣ್ಣೆ ಮತ್ತು 25 ಕ್ವಿಂಟಲ್ ಹಿಟ್ಟನ್ನು ಬಳಸಿ ಒಟ್ಟು 6 ಲಕ್ಷ ಮಿರ್ಚಿಗಳನ್ನು ಸ್ಥಳದಲ್ಲೇ ತಯಾರಿಸುವ ಗುರಿ ಹೊಂದಲಾಗಿದೆ.

ಇದಲ್ಲದೆ ಜಿಲೇಬಿ (5 ಕ್ವಿಂಟಲ್), ಖರ್ಜೂರ (7 ಕ್ವಿಂಟಲ್), ಶಂಕರಪೋಳಿ (5 ಕ್ವಿಂಟಲ್), ಸೋಂ ಪಾಪಡಿ (155 ಕೆ.ಜಿ), ಬೆಲ್ಲದಚ್ಚು (8 ಕ್ವಿಂಟಲ್) ಮತ್ತು ಬಾದಾಮಿ ಪುರಿ (1 ಕ್ವಿಂಟಲ್) ಕೂಡ ದಾಸೋಹದ ಪಟ್ಟಿಯಲ್ಲಿ ಸೇರಿವೆ.

ಸೋಮವಾರ ಸಂಜೆ ನಡೆದ ಅದ್ಧೂರಿ ಮಹಾರಥೋತ್ಸವದ ಬಳಿಕ ಭಕ್ತ ಸಾಗರವೇ ದಾಸೋಹ ಭವನದತ್ತ ಹರಿದು ಬರುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದ್ದು, ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಹೊಸ ವರ್ಷದ ಹೊಸ್ತಿಲಲ್ಲಿ ಕೊಪ್ಪಳದ ಜನತೆಗೆ ಗವಿಸಿದ್ಧೇಶ್ವರನ ಜಾತ್ರೆಯೇ ಮೊದಲ ಹಬ್ಬ. ಭಕ್ತಿ, ಭಾವ ಹಾಗೂ ತೃಪ್ತಿಯ ದಾಸೋಹದೊಂದಿಗೆ ಈ ಬಾರಿಯ ಜಾತ್ರೆ ಇತಿಹಾಸ ಬರೆಯಲು ಸಜ್ಜಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular