HomeEntertainmentಕಂಬಕ್ಕೆ ಜಾಕೆಟ್ ಸಿಲುಕಿ ಮುಜುಗರಕ್ಕೀಡಾದ ಶಾರುಖ್ ಪತ್ನಿ

ಕಂಬಕ್ಕೆ ಜಾಕೆಟ್ ಸಿಲುಕಿ ಮುಜುಗರಕ್ಕೀಡಾದ ಶಾರುಖ್ ಪತ್ನಿ

ಶಾರುಖ್ ಖಾನ್ ಪತ್ನಿ ಮತ್ತು ಏಸ್ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರು ಇತ್ತೀಚೆಗೆ ಮುಜುಗರಕ್ಕೀಡಾಗುವ ಪರಿಸ್ಥಿತಿ ಎದುರಿಸಿದರು.

ಗೌರಿ ಖಾನ್ ಎಂದಿನಂತೆ ಮುಂಬೈನ ಡಿಸೈನರ್ ಅಂಗಡಿಯೊಂದರ ಹೊರಗೆ ತನ್ನ ಸ್ನೇಹಿತರ ಜೊತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದರು.

ಪಾಪರಾಜಿಗಳು ಅವರ ಫೋಟೋಗಳನ್ನು ಕ್ಲಿಕ್ಕಿಸಿದರು. ಈ ವೇಳೆ ಅವರು ತಮ್ಮ ಕಾರಿನ ಕಡೆಗೆ ನಡೆಯುತ್ತಿದ್ದಾಗ, ಅವರ ಡೆನಿಮ್ ಜಾಕೆಟ್ ಕಂಬವೊಂದಕ್ಕೆ ಸಿಕ್ಕಿಹಾಕಿಕೊಂಡಿತು. ಅವರ ಮಗಳು ಸುಹಾನಾ ಖಾನ್ ಕೂಡ ಈ ವೇಳೆ ಜೊತೆಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗ ಗೌರಿ ಖಾನ್, ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿ ಒಂದು ಕ್ಷಣ ನಕ್ಕರು. ಅವರು ನೀಲಿ ಬಣ್ಣದ ಡೆನಿಮ್ ಜಾಕೆಟ್‌ ಮತ್ತು ಸ್ಲಿಟ್‌ನೊಂದಿಗೆ ಲ್ಯಾಸಿ ಮಿಡಿ ಉಡುಪನ್ನು ಧರಿಸಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular