HomeLive Newsಚಾಕೊಲೇಟ್ ಪಾನ್ ಗೆ ಗಾಂಜಾ ಬೆರಸಿ ಮಾರಾಟ: ಆರೋಪಿ ಅರೆಸ್ಟ್

ಚಾಕೊಲೇಟ್ ಪಾನ್ ಗೆ ಗಾಂಜಾ ಬೆರಸಿ ಮಾರಾಟ: ಆರೋಪಿ ಅರೆಸ್ಟ್

ದಾವಣಗೆರೆ: ಚಾಕೊಲೇಟ್ ಪಾನ್ ಗೆ ಗಾಂಜಾ ಬೆರೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಪಾನ್ ಅಂಗಡಿ ಮಾಲೀಕನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಪ್ಯಾರೆಲಾಲ್ ಅಲಿಯಾಸ್ ರಾಜು (38) ಬಂಧಿತ ಆರೋಪಿ. ದಾವಣಗೆರೆ ನಗರದ ರಾಮ್ ಆಂಡ್ ಕೋ ಸರ್ಕಲ್ ನಲ್ಲಿ ಪಾನ್ ಶಾಪ್ ಇಟ್ಟುಕೊಂಡಿದ್ದ. ಕಳೆದ ನಾಲ್ಕು ವರ್ಷಗಳಿಂದ ಪಾನ್ ಶಾಪ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಚಾಕೊಲೇಟ್ ನಲ್ಲಿ ಗಾಂಜಾ, ಚಾಕೊಲೇಟ್ ಪಾನ್ ಗೆ ಗಾಂಜಾ ಬೆರೆಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಅಪ್ರಾಪ್ತ ಮಗನ ಕೈಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಪಾನ್ ಗಳನ್ನು ಕೊಟ್ಟು ಕಾಲೇಜುಗಳ ಬಳಿ ಮಾರಾಟ ಮಾಡಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ರಾಜು ನನ್ನು ಬಂಧಿಸಿದ್ದಾರೆ. ಪ್ಯಾರೇಲಾಲ್ ಅಲಿಯಾಸ್ ರಾಜು ಉತ್ತರ ಪ್ರದೇಶದ ಅಲಹಾಬಾದ್ ನಿವಾಸಿ. ಗಾಂಜಾ ಮಿಶ್ರಿತ ಭೋಲೆ ಚಾಕೊಲೇಟ್ ಹೆಸರಿನ ಪಾನ್ ನನ್ನು ಉತ್ತರ ಪ್ರದೇಶದಲ್ಲಿ ಕೇವಲ 1-2 ರೂಪಾಯಿಗೆ ಮಾರಲಾಗುತ್ತದೆ. ದಾವಣಗೆರೆಯಲ್ಲಿ 50-60ರೂಪಾಯಿಗೆ ಆರೋಪಿ ಮಾರಾಟ ಮಾಡುತ್ತಿದ್ದ. ಗಾಂಜಾ ಮಿಶ್ರಿತ ಚಾಕೊಲೇಟ್ ನ್ನು ಮಕ್ಕಳು ಹಾಲು, ಜ್ಯೂಸ್ ಗಳಲ್ಲಿ ಬೆರೆಸಿ ಸೇವಿಸುತ್ತಿದ್ದರು. ಮಗನನ್ನೇ ಗಾಂಜಾ ಮಾರಾಟ ಕೃತ್ಯಕ್ಕೆ ಆರೋಪಿ ಬಳಸುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular