ಬೆಂಗಳೂರು: ಮನೆಯ ಅಂಗದಲ್ಲಿ ಐದು ಗಾಂಜಾ ಗಿಡ ಬೆಳೆದಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಚಂದ್ರಶೇಖರ್ ವಿರುದ್ಧದ ಕೇಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
2023ರಲ್ಲಿ ಬೆಂಗಳೂರಿನ ಜಯನಗರದ ನಿವಾಸಿ ಚಂದ್ರಶೇಖರ್ ಎಂಬುವವರ ಮನೆಯ ಅಂಗಳದಲ್ಲಿ ಗಾಂಜಾ ಗಿಡ ಬೇಳೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಮನೆ ಮೇಲೆ ದಾಲಿ ನಡೆಸಿ, ಮನೆಯ ಅಂಗಳದಲ್ಲಿ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ಬೇರು ಸಮೇತ ವಶಕ್ಕೆ ಪಡೆದಿದ್ದರು. ಸುಮಾರು 27 ಕೆಜಿ ತೂಕದ ಗಾಂಜಾ ಗಿಡ ಜಪ್ತಿ ಮಾಡಲಾಗಿತ್ತು. ಮನೆ ಮಾಲೀಕ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ವೇಳೆ ಚಂದ್ರಶೇಖರ್ ಪರ ವಕೀಲರು, ಉದ್ದೇಶಪೂರ್ವಕವಾಗಿ ಗಾಂಜಾ ಬೆಳೆಸಿದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಪರಾಗಸ್ಪರ್ಶದಿಂದ ತಾನಾಗೇ ಗಾಂಜಾ ಗಿಡ ಬೆಳೆದುಕೊಂಡಿರಬಹುದು ಎಂದು ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಚಂದ್ರಶೇಖರ್ ವಿರುದ್ಧದ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.