ಮೈಸೂರಿನಲ್ಲಿ ಪೊಲೀಸರ ಭರ್ಜರಿ ಬೇಟೆ: ಮನೆಯಲ್ಲಿ ಬಚ್ಚಿಟ್ಟಿದ್ದ 154 ಕೆಜಿ ಗಾಂಜಾ ವಶಕ್ಕೆ

ಮೈಸೂರು: ಮೈಸೂರಿನಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, 154 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

ಸೈಯದ್ ವಾಸಿಂ, ಯಾಸ್ಮಿನ್ ತಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಲ್ಯಾಣಗಿರಿಯ ಕೆಹೆಚ್‌ಬಿ ಕಾಲೋನಿಯ ಮನೆಯಲ್ಲಿ ಇವರು ಗಾಂಜಾ ಸಂಗ್ರಹಿಸಿದ್ದರು. 8 ಚೀಲಗಳಲ್ಲಿ ತುಂಬಿಸಿಟ್ಟಿದ್ದ 154 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read