HomeKarnatakaBIG NEWS: ಜೆಡಿಎಸ್ ಎಚ್ಚತ್ತುಕೊಳ್ಳದಿದ್ದರೆ ರಾಜಕೀಯವಾಗಿ ಸರ್ವನಾಶವಾಗಲಿದೆ: ಪ್ರಧಾನಿ ಮೋದಿ ನಟ ಭಯಂಕರ: ಶಾಸಕ ಗಣಿಗ...

BIG NEWS: ಜೆಡಿಎಸ್ ಎಚ್ಚತ್ತುಕೊಳ್ಳದಿದ್ದರೆ ರಾಜಕೀಯವಾಗಿ ಸರ್ವನಾಶವಾಗಲಿದೆ: ಪ್ರಧಾನಿ ಮೋದಿ ನಟ ಭಯಂಕರ: ಶಾಸಕ ಗಣಿಗ ರವಿ ವಾಗ್ದಾಳಿ

ಮಂಡ್ಯ: ಬಿಜೆಪಿಯವರು ಒಕ್ಕಲಿಗರಿಗೆ ಅನ್ಯಾಅಯ ಮಾಡಿದ್ದಾರೆ. ಪಕ್ಷಕ್ಕೆ ಕರೆದುಕೊಳ್ಳುವುದು ಟೀಶ್ಯೂ ತರಹ ಉಪಯೋಗಿಸಿಕೊಳ್ಳುವುದು ಬಿಸಾಡುವುದು ಇದನ್ನೇ ಮಾಡುತ್ತಾ ಬಂದಿದ್ದಾರೆ ಬಿಜೆಪಿ ನಾಯಕರು ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಿಳಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, ಜೆಡಿಎಸ್ ನವರಿಗೆ ನಾನು ಆವತ್ತಿನಿಂದ ಹೇಳುತ್ತಾ ಬಂದಿದ್ದೆ. ನಿಮ್ಮ ಗ್ರೌಂಡ್ ನ್ನು, ನಿಮ್ಮಕೇಡರ್ ನ್ನು ಕಿತ್ತುಕೊಳ್ಳಲು ಮಾತ್ರ ಬಿಜೆಪಿಯವರು ನಿಮ್ಮಜೊತೆ ಇದ್ದಾರೆ. ಬಿಸ್ಕೆಟ್ ತರ ಹೆಚ್.ಡಿ.ಕುಮಾರಸ್ವಾಅಮಿ ಅವರಿಗೆ ಒಂದು ಕೇಂದ್ರ ಮಂತ್ರಿ ಕೊಟ್ಟಿದ್ದಾರೆ. ಆದರೆ ನಿಮ್ಮನ್ನು ರಾಜಕೀಯವಾಗಿ ಸರ್ವನಾಶ ಮಾಡುತ್ತಾರೆ. ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.

ಹಳೇ ಮೈಸೂರಿನಲ್ಲಿರುವ ಜೆಡಿಎಸ್ ಗ್ರೌಂಡ್ ಕಿತ್ತುಕೊಳ್ಳಲು ಬಿಜೆಪಿಯವರು ತಂತ್ರ ನಡೆಸುತ್ತಿದ್ದಾರೆ. ನನಗೆ ಬಹಳ ಬೇಸರವಾಗಿರುವುದೇನೆಂದರೆ ಪಾಪ ಹೆಚ್.ಡಿ ದೇವೇಗೌಡರು ಹಿರಿಯರು, ಸಂಭಾವಿತರು, 70 ವರ್ಷಗಳ ಕಾಲ ರಾಜಕಾರಣ ಮಾಡಿದ ಮಾಜಿ ಪ್ರಧಾನಿ, ದೇವೆಗೌಡರಿಗೆ ರಾಜ್ಯಸಭೆ ಟಿಕೆಟ್ ನ್ನು ಬಿಜೆಪಿಯವರು ತಪ್ಪಿಸುತ್ತಾರೆ ಎಂದರೆ ಅವರಿಗೆ ದೇವರು ಒಳ್ಳೆಯದು ಮಾಡುತ್ತಾನಾ? ಎಂದು ಪ್ರಶ್ನಿಸಿದರು. ಅದು ಅವರ ಪಕ್ಷದ ಆಂತರಿಕ ವಿಚಾರ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಅವರ ಪಕ್ಷದ ನಿರ್ಧಾರ ಅದರ ಬಗ್ಗೆ ನಾನು ಮಾತನಾಡುತ್ತಿಲ್ಲ,ಆದರೆ ದೇವೇಗೌದರಂತ ಅನುಭವಿ ಹಿರಿಯರನ್ನು ಬಿಟ್ಟು ಬೇರೆ ಯಾರಿಗೋ ನೀಡಿದ್ದಾರೆ ಎಂಬುದು ಬೇಸರದ ವಿಚಾರ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ಮೋದಿಯವರು ದೇವೇಗೌಡರಿಗೆ ಯಾವಾಗಲೂ ವಿಶೇಷ ಗೌರವ ಕೊಡುತ್ತೇವೆ ಎಂಬ ರೀತಿ ನಾಟಕವಾಡುತ್ತಾರೆ. ಟಿವಿಗಾಗಿ, ವಿಡಿಯೋಗಾಗಿ ಇಂತಹ ಡ್ರಾಮ ಮಾಡುತ್ತಾರೆ. ಪ್ರಧಾನಿ ಮೋದಿ ಒಬ್ಬ ನಟ ಭಯಂಕರರು ಎಂದು ಕಿಡಿಕಾರಿದರು.

ಮಂಡ್ಯಗೆ ಚಪ್ಪಡಿ ಕಲ್ಲು ಎಳೆದಾಯ್ತು. ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದೂ ಆಯ್ತು. ಅಂಬರೀಷ್ ಕುಟುಂಬ ಎಂದರೇನು? ಸುಮಲತಾ ಅವರು ತ್ಯಾಗ ಮಾಡಿದ್ದಾರೆ. ಆದರೂ ಅವರಿಗೆ ಬಿಜೆಪಿಯವರು ಒಂದು ಟಿಕೆಟ್ ಕೊಡಲ್ಲ, ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಅಂಬರೀಶ್ ಅವರು ಮಂಡ್ಯದ ಆಸ್ತಿ. ಅವರ ಪತ್ನಿ ಸುಮಲತಾ ಬಿಜೆಪಿಗೆ ಹೋಗಿದ್ದಾರೆ ಅಂದ ಮೇಲೆ ಅವರನ್ನು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಅಂಬರೀಷ್ ಅಣ್ಣನ ಕುಟುಂಬವನ್ನು ಈ ರೀತಿ ನಡು ನೀರಿನಲ್ಲಿ ಬಿಜೆಪಿಯವರು ಕೈಬಿಟ್ಟಿದ್ದಾರೆ ಎಂದು ಬೇಸರವಾಯಿತು. ದೇವೇಗೌಡರನ್ನು ಹಾಗೂ ಸುಮಲತಾ ಅವರನ್ನು ಬಿಜೆಪಿಯವರು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular