ಜೈಲಿನಲ್ಲೇ ಹತ್ಯೆ ಮಾಡಿ ಕೈದಿಗಳ ಸಂಭ್ರಮಾಚರಣೆ; ವಿಡಿಯೋ ವೈರಲ್ ಬಳಿಕ ಜೈಲಾಧಿಕಾರಿಗಳು ಸಸ್ಪೆಂಡ್

ಜೈಲಿನೊಳಗೆ ಇಬ್ಬರು ಸಹ ಕೈದಿಗಳನ್ನು ಹತ್ಯೆ ಮಾಡಿದ ಕೈದಿಗಳ ಗುಂಪು ಸಂಭ್ರಮಾಚರಣೆ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಪಂಜಾಬ್ ನಲ್ಲಿ 7 ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪಂಜಾಬ್ ಪೊಲೀಸರಿಗೆ ಮುಜುಗರವನ್ನುಂಟು ಮಾಡುವ ರೀತಿಯಲ್ಲಿ, ಕಳೆದ ವಾರ ಜೈಲಿನಲ್ಲಿ ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರನ್ನು ಕೊಂದಿದ್ದರು. ತರನ್ ತರನ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ಹತ್ಯೆಕೋರರ ಗುಂಪು ಸಂಭ್ರಮಿಸ್ತಿದ್ದ ವಿಡಿಯೋ ಕ್ಲಿಪ್ ಹೊರಬಂದಿತ್ತು.

ಹತ್ಯೆಕೋರರು ಸಂಭ್ರಮಿಸ್ತಿರುವ ವಿಡಿಯೋದಲ್ಲಿ ಕೆಲವು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯಿದ್ದು ಅವರ ಪಕ್ಕದಲ್ಲೇ ನೆಲದ ಮೇಲೆ ಮಲಗಿರುವ ಮೃತದೇಹ ತೋರಿಸುತ್ತಿದ್ದರು. ಈ ವೈರಲ್ ಕ್ಲಿಪ್‌ನ ನಂತರ ಏಳು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಜೈಲು ಸೂಪರಿಂಟೆಂಡೆಂಟ್ ಸೇರಿದಂತೆ ಅವರಲ್ಲಿ ಐವರನ್ನು ಬಂಧಿಸಲಾಯಿತು.

ಕಳೆದ ಭಾನುವಾರ ತರನ್ ತರನ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದಂತೆ ಏಳು ದರೋಡೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗಾಯಕ ಸಿದ್ದು ಮೂಸೆವಾಲ ಹತ್ಯೆ ಪ್ರಕರಣದ ಆರೋಪಿಗಳಾದ ಬಟಾಲದ ಮನದೀಪ್ ಸಿಂಗ್ ಅಲಿಯಾಸ್ ತೂಫಾನ್ ಮತ್ತು ಬುದ್ದಲದ ನಿವಾಸಿ ಮನಮೋಹನ್ ಸಿಂಗ್ ಅಲಿಯಾಸ್ ಮೋಹ್ನಾ‌, ಕೈದಿಗಳ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ.

ಜಗ್ಗು ಭಗವಾನ್ ಪುರಿಯಾ ಮತ್ತು ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಎರಡು ಗ್ಯಾಂಗ್‌ಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆಲವು ಸದಸ್ಯರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾದ ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೊದಲ್ಲಿ, ಸಚಿನ್ ಭಿವಾನಿ ಎಂದು ತನ್ನನ್ನು ತಾನು ಗುರುತಿಸಿಕೊಂಡ ಕೈದಿಯೊಬ್ಬ ಕೊಲೆಯಾದ ದರೋಡೆಕೋರರು ಜಗ್ಗು ಭಗವಾನ್‌ಪುರಿಯ ಸಹಾಯಕರು ಎಂದು ಹೇಳಿದ್ದಾನೆ.

ಈ ಘಟನೆಯಿಂದ ಪಂಜಾಬ್‌ನ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪವನ್ನ ವಿರೋಧ ಪಕ್ಷಗಳಿಂದ ಎದುರಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read