ಹೈದರಾಬಾದ್: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅಪಾರ್ಟ್‌ಮೆಂಟ್ ಕಟ್ಟಡದಿಂದ ಮಾಂಸವನ್ನು ಎಸೆದ ಘಟನೆ ನಡೆದಿದ್ದು, ಇದರಿಂದಾಗಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಘಟನೆ ನಡೆದಿದೆ.
ಗಣೇಶ ಮೂರ್ತಿ ಮೆರವಣಿಗೆ ಮೇಲೆ ಅಪಾರ್ಟ್ ಮೆಂಟ್ ವೊಂದರ ಏಳನೇ ಮಹಡಿಯಿಂದ ಎಸೆಯಲಾಗಿದೆ. ಈ ಪ್ರಕರಣ ಸಂಬಂಧ ಚಾರ್ಮಿನಾರ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಚಾರ್ಮಿನಾರ್ ವಲಯದ ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್‌ನ ಮೂವರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಚಾರ್ಮಿನಾರ್ ವಲಯದ ಡಿಸಿಪಿ ಖರೆ ಕಿರಣ್ ತಿಳಿಸಿದ್ದಾರೆ. ಮೊಹಮ್ಮದ್ ಇಮ್ರಾನ್ ಖುರೇಷಿ, ಅರ್ಷಿಯಾ ಬೇಗಂ ಮತ್ತು ಸಬೀನಾ ಬಂಧಿತರು.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳು ಅಥವಾ ಪರಿಶೀಲಿಸದ ಮಾಹಿತಿಯನ್ನು ನಂಬಬೇಡಿ. ಇತರರಿಗೆ ಹರಡದಂತೆ ಡಿಸಿಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಕಲಿ ಔಷಧ ಮಾಫಿಯಾ: FDA ಸಹಾಯಕ ನಿಯಂತ್ರಕ ಸಸ್ಪೆಂಡ್
ಬೆಂಗಳೂರು: ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂಡವಾಗಿದ್ದು, ಸರ್ಕಲ್-1ರ ಸಹಾಯಕ ಔಷಧ ನಿಯಂತ್ರಕ (ADC) ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಓಂಕಾರೇಶ್ವರ್ ಅಮಾನತುಗೊಂಡಿರುವ ಸಹಾಯಕ ಔಷಧ ನಿಯಂತ್ರಕ. ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ನಕಲಿ ಔಷಧ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಓಂಕಾರೇಶ್ವರ್ ಅವರನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ನಕಲಿ ಔಷಧಗಳನ್ನು ವಿವಿಧ ಆಸ್ಪತ್ರೆಗಳಿಗೂ ನೀಡಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಯಾವೆಲ್ಲ ಆಸ್ಪತ್ರೆಗಳಿಗೆ ಈ ಜಾಲ ನಕಲಿ ಔಷಧಗಳನ್ನು ಸಪ್ಲೈ ಮಾಡಿತ್ತು ಎಂಬುದನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಹೆಚ್ಚಿದ್ದಾರೆ. ದೇಶದ ಹಲವೆಡೆ ಆಸ್ಪತ್ರೆಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಶಾಕ್ ನೀಡಿದ್ದು, ಬೆಂಗಳೂರು ಸೇರಿ 15ಕ್ಕೂ ಹೆಚ್ಚು ಆಸ್ಪತ್ರೆಗಳ ಫಾರ್ಮಸಿಗಳಿಗೆ ನೋಟಿಸ್ ನೀಡಲಾಗಿದ್ದು, ಫಾರ್ಮಸಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.
ಕ್ಯಾನ್ಸರ್ ಔಷಧ, ಜೀವ ರಕ್ಷಕ ಔಷಧ ಹಾಗೂ ಐಸಿಯು ಇಂಜೆಕ್ಷನ್‌ಗಳನ್ನು ಆಸ್ಪತ್ರೆಗಳಿಗೆ ಪೂರೈಸಿದ ಡಿಸ್ಟ್ರಿಬ್ಯೂಟರ್‌ಗಳು, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಯಾರೆಲ್ಲ ನಿಯಮ ಉಲ್ಲಂಘಿಸಿದ್ದಾರೆ? ಮಾನದಂಡಗಳನ್ನು ಫಾಲೋ ಮಾಡಿಲ್ಲ? ಎಂಬುದರ ಪರಿಶೀಲನೆ ನಡೆಯುತ್ತಿದ್ದು, ಕೇವಲ ಆಸ್ಪತ್ರೆಗಳ ಫಾರ್ಮಸಿ ಪರವಾನಿಗೆ ಮಾತ್ರವಲ್ಲದೆ ಡಿಸ್ಟ್ರಿಬ್ಯೂಟರ್ಗಳ ಲೈಸೆನ್ಸ್ ರದ್ದಿಗೂ ಕ್ರಮ ಕೈಗೊಳ್ಳಲಾಗಿದೆ. ಇದಿರಂದ ನಕಲಿ ಔಷಧ ಜಾಲದಲ್ಲಿ ಸೇರಿಕೊಂಡು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದವರೆಲ್ಲರಿಗೂ ಆತಂಕ ಶುರುವಾಗಿದೆ.
ಮತ್ತೊಂದೆಡೆ ವ್ಯಾಪಕ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಶಾಕ್ ನೀಡಿದ್ದು, ಔಷಧಗಳ ಗುಣಮಟ್ಟ ಟೆಸ್ಟ್ ಮಾಡಲು ಮುಂದಾಗಿದೆ. ರ್ಯಾಂಡಮ್ ಟೆಸ್ಟ್ ಮೂಲಕ ಗುಣಮಟ್ಟ ಪರೀಕ್ಷೆ ನಡೆಯಲಿದೆ. ಹಲವು ಮೆಡಿಸಿನ್ಗಳಿಗೆ ಪ್ರಿಸ್ಕ್ರಿಪ್ಷನ್ ಅತ್ಯಗತ್ಯ. ಆದರೆ ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವಾಗ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲ.
ವೈದ್ಯರು ಬರೆದಿರುವ ಔಷಧದ ಬದಲಿಗೆ ಪರ್ಯಾಯ ಬ್ರ್ಯಾಂಡ್ ಅಥವಾ ಬೇರೆ ಔಷಧದ ಸಲಹೆ ನೀಡಲಾಗುತ್ತಿದೆ. ಇದರಿಂದ ರೋಗಿಯ ಚಿಕಿತ್ಸೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಿದ್ದರೂ ಕೆಲವು ಕಂಪನಿಗಳು ಭಾರಿ ಡಿಸ್ಕೌಂಟ್ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುವ ಬಗ್ಗೆ ಕೂಡ ವಿರೋಧ ಕೇಳಿ ಬಂದಿದೆ. ಹೀಗಾಗಿ ಇವುಗಳ ನಿಯಂತ್ರಣಕ್ಕೂ ಎಫ್ ಡಿಎ ಮುಂದಾಗಿದೆ.

