HomeEntertainmentಗಾಂಧಿನಗರದಲ್ಲಿ 'ಅಮೆರಿಕಾ ಅಮೆರಿಕಾ 2' ಸದ್ದು: ಇಂದು ಅಧಿಕೃತವಾಗಿ ಹೊರಬೀಳಲಿದೆ ಬಹುನಿರೀಕ್ಷಿತ ಟ್ರೈಲರ್

ಗಾಂಧಿನಗರದಲ್ಲಿ ‘ಅಮೆರಿಕಾ ಅಮೆರಿಕಾ 2’ ಸದ್ದು: ಇಂದು ಅಧಿಕೃತವಾಗಿ ಹೊರಬೀಳಲಿದೆ ಬಹುನಿರೀಕ್ಷಿತ ಟ್ರೈಲರ್

ಸ್ಯಾಂಡಲ್‌ವುಡ್‌ನ ಕ್ಲಾಸಿಕ್ ಹಿಟ್ ಚಿತ್ರಗಳಲ್ಲಿ ಒಂದಾದ ‘ಅಮೆರಿಕಾ ಅಮೆರಿಕಾ’ ಸಿನಿರಸಿಕರ ನೆನಪಿನಲ್ಲಿ ಎಂದೆಂದಿಗೂ ಉಳಿಯುವಂತಹ ಸಿನಿಮಾ. ಇದೀಗ ಈ ಹೆಸರಿನ ಮುಂದುವರಿದ ಭಾಗವಾಗಿ ಮೂಡಿಬರುತ್ತಿರುವ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಇಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಕುರಿತು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಾಗತಿಹಳ್ಳಿ ಸಿನಿಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೂಪುಗೊಂಡಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಾರಾಗಣದ ಕಾರಣದಿಂದಾಗಿಯೇ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಚಿತ್ರತಂಡದ ತಾಂತ್ರಿಕ ವರ್ಗದಲ್ಲೂ ಅನುಭವಿಗಳ ಬಳಗವೇ ಇದೆ. ಎಸ್‌ಕೆ ರಾವ್ ಅವರ ಛಾಯಾಗ್ರಹಣ, ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಹಾಗೂ ಭೂಷಣ್ ಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ‘ಅಮೆರಿಕಾ ಅಮೆರಿಕಾ’ ಮೊದಲ ಭಾಗವು ಭಾವನಾತ್ಮಕ ಕಥಾಹಂದರದಿಂದ ಕನ್ನಡಿಗರ ಮನಗೆದ್ದಿತ್ತು. ಇದೀಗ ಟ್ರೇಲರ್ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 11ಕ್ಕೆ ಬೆಳ್ಳಿಪರದೆಗೆ ಬರಲಿರುವ ಈ ಚಿತ್ರ ಸಿನಿರಸಿಕರಲ್ಲಿ ಭಾರೀ ಕೌತುಕ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular