ಕಲಬುರಗಿ: ಜೂಜಾಟದಲ್ಲಿ ತೊಡಗಿದ್ದ ಕಾಂಗ್ರೆಸ್, ಬಿಜೆಪಿ ಮುಖ್ಯಮಂಡರು ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಕಲ್ಯಾಣ ಮಂಟಪದ ಹಿಂದೆ ಜೂಜಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿದ್ದಾರೆ. ಏಳು ಜನರನ್ನು ಬಂಧಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವರುದ್ರಪ್ಪ, ಜಗನಗೌಡ, ಬಿಜೆಪಿ ಮುಖಂಡ ಶರಣಗೌಡ, ಸೋಮಶೇಖರ್ ಸೇರಿದಂತೆ ಏಳು ಜನರು ಬಂಧಿತರು.
ಆರೋಪಿಗಳಿಂದ 59,220 ರೂಪಾಯಿ ಹಣ, ಕಾರ್ಡ್ಸ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.