HomeKarnatakaಗದಗದಲ್ಲಿ ಘೋರ ಘಟನೆ: ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಗದಗದಲ್ಲಿ ಘೋರ ಘಟನೆ: ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಗದಗ: ಯುವಕನೋರ್ವನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಹುಯಿಲಗೋಳದಲ್ಲಿ ನಡೆದಿದೆ.

ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳವಾಡಿದ್ದರು. ಮೈ ಮೇಲೆ ಬೈಕ್​​ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ತಮ್ಮ ಮಗನನ್ನು ಕೊಲೆ ಮಾಡಿದದರೆ ಎಂದು ಪೋಷಕರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನಗೆ ಮೂರು ಎಕರೆ ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮೆನ ಬಿಡುವುದಿಲ್ಲ ಎಂದು ಯುವಕನ ತಂದೆ ಬಸವರಾಜ್ ಶಪಥ ಮಾಡಿದಾರೆ. ಅಲ್ಲದೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕರಾಗಿದ್ದಾರೆ.

ಪ್ರಜರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular