HomeKarnatakaBIG NEWS: ಶಿವರಾತ್ರಿ ದಿನದಂದೇ ದುಷ್ಕರ್ಮಿಗಳ ಅಟ್ಟಹಾಸ: ಗದಗದಲ್ಲಿ ಶಿವಲಿಂಗ, ನಂದಿವಿಗ್ರಹ ಭಗ್ನ

BIG NEWS: ಶಿವರಾತ್ರಿ ದಿನದಂದೇ ದುಷ್ಕರ್ಮಿಗಳ ಅಟ್ಟಹಾಸ: ಗದಗದಲ್ಲಿ ಶಿವಲಿಂಗ, ನಂದಿವಿಗ್ರಹ ಭಗ್ನ

ಗದಗ: ನಾಡಿನಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಕ್ತರು ಶಿವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಶಿವರಾತ್ರಿ ದಿನದಂದೇ ಗದಗ ಜಿಲ್ಲೆಯ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಿವಲಿಂಗ, ನಂದಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ರಾತ್ರಿ ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರವಲಯದಲ್ಲಿರುವ ಶ್ರೀರಾಮಲಿಂಗೇಶ್ವರ ಹಾಗೂ ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಭಕ್ತರು ಶಿವಲಿಂಗ, ನಂದಿ ವಿಗ್ರಹಕ್ಕೆ ಪೂಜೆಗೆಂದು ದೇವಸ್ಥಾನಕ್ಕೆ ಬಂದಿದ್ದ ವೇಳೆ ದೇವರ ವಿಗ್ರಹ, ಶಿವಲಿಂಗ ಭಗ್ನಗೊಂಡಿರುವುದು ಕಂಡು ಬೆಚ್ಚಿ ಬಿದ್ದಿದ್ದಾರೆ. ಶಿವರಾತ್ರಿ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಗ್ರಾಮಸ್ಥರು ದೇವಸ್ಥಾನದಲ್ಲಿ ಸುಣ್ಣ, ಬಣ್ಣ ಹಚ್ಚಿ ದೇವಾಲಯವನ್ನು ಅಲಂಕರಿಸಿ ಹೋಗಿದ್ದು. ಇಂದು ಬೆಳಿಗ್ಗೆ ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ರಾಮಲಿಂಗೇಶ್ವರ ಲಿಂಗದ ಪಾಣಿಬಟ್ಟಲು, ಎದುರಿನ ನಂದಿ ವಿಗ್ರಹದ ಮುಖ ಹಾಗೂ ದೇವಸ್ಥಾನದ ಹಿಂಭಾಗದಲ್ಲಿರುವ ಹೊನ್ನೆತ್ತಮ್ಮ ದೇವಿ ವಿಗ್ರಹವನ್ನೂ ವಿರೂಪಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಮೊದಲು ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular